ಬೆಳ್ತಂಗಡಿ: ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ಅರಮಲೆ ಬೆಟ್ಟ ಆವರಣದಲ್ಲಿ ಅಕ್ಷರೋತ್ಸವ-2025 ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು ನ. 27ರಂದು ನಡೆಯಿತು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಸಿನಿ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ಸುರೇಂದ್ರ ಎಸ್.ವಾಗ್ಲೆ ನೂತನ ಗ್ರಂಥಗಳ ಲೋಕಾರ್ಪಣೆ ಮಾಡಿದರು.
ಯಕ್ಷ ಕಲಾ ರಂಗದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ, ಕೃಷಿಕ ಅನಿಲ್ ಭಟ್ ಬಳಂಜ, ಪಾರಂಪರಿಕ ವೈದ್ಯ ಕುಶಾಲಪ್ಪ ಗೌಡರಿಗೆ, ದೈವಾರಾಧಕ ಸುರೇಶ್ ಕುಮಾರ್ ಅರಿಗರಿಗೆ ಎಕ್ಸೆಲ್ ಅಕ್ಷರ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಮಂತ್ರಣ ಪರಿವಾರದ ದಶಮಾನೋತ್ಸವ ಸಂಭ್ರಮದ ಸಹಯೋಗದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ನಾಯಕ್ ಅಜೇರು, ಉಜಿರೆಯ ಬಿ. ಜನಾರ್ಧನ ತೋಳ್ಪಾಡಿತ್ತಾಯ, ಗುರುವಾಯನಕೆರೆಯ ಚಂದ್ರಶೇಖರ ಆಚಾರ್ಯರ ಹಿಮ್ಮೇಳದಲ್ಲಿ, ರಕ್ಷಿತ್ ಪಡ್ರೆ, ಚಂದ್ರಶೇಖರ ಧರ್ಮಸ್ಥಳ, ಪ್ರಶಾಂತ್ ನೆಲ್ಯಾಡಿಯವರ ಮುಮ್ಮೇಳದಲ್ಲಿ ಯಕ್ಷಗಾನ ನಾಟ್ಯ ವೈಭವ ನಡೆಯಯಿತು.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಡಾ | ಶ್ರೀನಾಥ್ ಎಂ.ಪಿ, ದ.ಕ.ಜಿ.ಕ.ಸಾ.ಪ ಅಧ್ಯಕ್ಷರಾದ ಯದುಪತಿ ಗೌಡ, ಹಿರಿಯ ಮುತ್ಸದ್ಧಿ ಭುಜಬಲಿ ಧರ್ಮಸ್ಥಳ, ಅಳದಂಗಡಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ವಿದ್ಯಾಸಾಗರ ಕ್ಯಾಂಪಸ್ ನ ಪ್ರಾಂಶುಪಾಲರಾದ ಪ್ರಜ್ವಲ್ ಉಪಸ್ಥಿತರಿದ್ದರು.

