ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಹಾಗೂ ಜನಜಾಗೃತಿ ವೇದಿಕೆ ಕಣಿಯೂರು ವಲಯ ಮತ್ತು ಶ್ರೀ ಉಮಾಮಹೇಶ್ವರ ದೇವಸ್ಥಾನ ಮೆಲ್ಲೆಂಗಲ್ಲು ಜಂಟಿ ಆಶ್ರಯದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಉಮಾಮಹೇಶ್ವರ ದೇವರಿಗೆ ಸೀಯಾಳ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲೆಂಗಲ್ಲು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸದಾನಂದ ಮೆಲಾಂಟ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜಿ ಜಿ.ಪಂ ಉಪಾಧ್ಯಕ್ಷೆ ರಾಜಶ್ರೀ ಎಸ್. ಹೆಗ್ಡೆ ರವರು ಬಾಗವಹಿಸಿ ಪೂಜ್ಯರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು.
ವಿಶೇಷ ಆಹ್ವಾನಿತರಾಗಿ ಧರ್ಣಪ್ಪ ಗೌಡ ಬಾನಡ್ಕ ಒಕ್ಕೂಟದ ವಲಯಾಧ್ಯಕ್ಷ ರಮಾನಂದ ಪೂಜಾರಿ ಹಾಗೂ ಉಮಾಮಹೇಶ್ವರ ದೇವಸ್ಥಾನ ಮಲ್ಲೆಂಗಲ್ಲು ಇದರ ಆಡಳಿತ ಮೊಕ್ತೇಸರ ಚಿದಾನಂದ ರಾವ್ ಕೊಲ್ಲಜೆರವರು ಉಪಸ್ಥಿತರಿದ್ದರು.
ರೈತ ಬಂಧು ಸಂಸ್ಥೆಯ ಮಾಲಕ ಶಿವಶಂಕರ್ ನಾಯಕ್ ರವರು ಸ್ವಾಗತ ಮತ್ತು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀತಾ ಪ್ರಾರ್ಥನೆ ಮಾಡಿದರು. ಜನಜಾಗೃತಿ ವಲಯಾಧ್ಯಕ್ಷ ಪ್ರಫುಲ್ಲಚಂದ್ರ ಅಡ್ಯಂತಾಯ, ಪದ್ಮುಂಜ ಸಹಕಾರಿ ಸಂಘ ಅಧ್ಯಕ್ಷ ರಕ್ಷಿತ್ ಶೆಟ್ಟಿ, ತಿಮ್ಮಯ್ಯ ಗೌಡ ಪದ್ಮುಂಜ, ಸುದರ್ಶನ ಹೆಗ್ಡೆ ಕಣಿಯೂರು ಗುತ್ತು, ಗ್ರಾ.ಪಂ ಅಧ್ಯಕ್ಷ ಸೀತಾರಾಮ ಮಡಿವಾಳ, ವಿಠಲ ಶೆಟ್ಟಿ ಕೊಲ್ಲೊಟ್ಟು ಹಾಗೂ ಊರಿನ ಗಣ್ಯರು, ಊರಿನ ಭಾಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಕಣಿಯೂರು ವಲಯದ ಮೇಲ್ವಿಚಾರಕಿ ಶಿಲ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು. ಸೇವಾಪ್ರತಿನಿಧಿ ಸೀತಾರಾಮ ಆಳ್ವ ಧನ್ಯವಾದ ಸಲ್ಲಿಸಿದರು.

