Site icon Suddi Belthangady

ಧರ್ಮಸ್ಥಳ: ಡಾ. ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ನಾರ್ಯ ಷಣ್ಮುಖ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆ


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಷಣ್ಮುಖ ಭಜನಾ ಮಂಡಳಿ ಸದಸ್ಯರಿಂದ ಧರ್ಮಸ್ಥಳ ದೇವಸ್ಥಾನದಲ್ಲಿ ಭಜನಾ ಸೇವೆ ಹಾಗೂ ಹೆಗ್ಗಡೆಯವರಿಗೆ ಫಲ ಪುಷ್ಪ ನೀಡಿ ಆಶೀರ್ವಾದ ಪಡೆದುಕೊಂಡರು.

ಹೆಗ್ಗಡೆಯವರು ಭಜನಾ ಮಂಡಳಿಯ ಸದಸ್ಯರಿಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಹಾಗೂ ಎಲ್. ಎಚ್. ಮಂಜುನಾಥ್ ರವರು ಭಜನಾ ಮಂಡಳಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿ ಇನ್ನು ಮುಂದಕ್ಕೂ ಉತ್ತಮ ಭಜನಾ ಮಂಡಳಿಯಾಗಿ ಮುಂದುವರೆಯಲಿ ಎಂದು ಆಶೀರ್ವದಿಸಿದರು.ಸುಬ್ರಹ್ಮಣ್ಯ ಪ್ರಸಾದ್ ಭಜನಾ ಮಂಡಳಿಯ ಸದಸ್ಯರನ್ನು ಅಭಿನಂದಿಸಿ ಇನ್ನು ಮುಂದಕ್ಕೂ ಕ್ಷೇತ್ರದಲ್ಲಿ ನಡೆಯುವಂತಹ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗವಹಿಸಿ ಮತ್ತು ಭಜನೆಗೆ ಬರುವಂತಹ ಮಕ್ಕಳು ಶೈಕ್ಷಣಿಕ ಹಾಗೂ ಶಾರೀರಿಕ ವಿಷಯದಲ್ಲೂ ಉತ್ತಮವಾಗಿರುತ್ತಾರೆಂದು ತಿಳಿಸಿದರು.

ಇನ್ನು ಮುಂದಕ್ಕೂ ಭಜನಾ ಮಂಡಳಿಯಲ್ಲಿ ಹೆಚ್ಚು ಸೇವೆ ಮಾಡುವಂತಹ ಅವಕಾಶ ನಿಮಗೆ ಶ್ರೀ ಮಂಜುನಾಥ ದೇವರು ಕರುಣಿಸಲಿ ಎಂದು ಆಶೀರ್ವಾದ ಮಾಡಿದರು. ಈ ಸಮಯದಲ್ಲಿ ಕುಣಿತ ಭಜನಾ ಗುರು ನಾಗೇಶ್ ಬಿ. ನೆರಿಯ, ದಕ್ಷಿಣ ಕನ್ನಡ ಜಿಲ್ಲಾ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಮನ್ವಯಾಧಿಕಾರಿ ಸಂತೋಷ್ ಅಳಿಯೂರು, ಹರ್ಷ ಹೆಗ್ಡೆ, ಸುರೇಂದ್ರ ಹಾಗೂ ಭಜನಾ ಮಂಡಳಿಯ ಪೋಷಕರು ಭಾಗವಹಿಸಿದ್ದರು.

Exit mobile version