Site icon Suddi Belthangady

ಧರ್ಮಸ್ಥಳ: ಕಳ್ಳತನ ಪ್ರಕರಣ-ತಾಯಿ ಮಗಳ ಬಂಧನ-ಕೋರ್ಟ್ ನಲ್ಲಿ ನ್ಯಾಯಾಂಗ ಬಂಧನಕ್ಕೆ ಆದೇಶ

ಬೆಳ್ತಂಗಡಿ: ಮೇ 3ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಚಿನ್ನದ ಆಭರಣಗಳನ್ನು ಎಗರಿಸಿರುವ ಪ್ರಕರಣದಲ್ಲಿ ಹುಬ್ಬಳ್ಳಿಯ ತಾಯಿ ಮತ್ತು ಮಗಳನ್ನು ಪೊಲೀಸರು ಬಂಧಿಸಿದ್ದಾರೆ. 97ಗ್ರಾಂ ಕದ್ದಿರುವ ಪ್ರಕರಣದಲ್ಲಿ 76 ಗ್ರಾಂ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ತಾಯಿ ಬೀಬಿಜಾನ್ (59) ಗಂಡ ದಸ್ತಗಿರ್ ಸಾಬ್ ಎರಡನೇ ಕ್ರಾಸ್ ಗಂಗಾಧರ ನಗರ ಸೆಟಲ್ ಮೆಂಟ್ ಹುಬ್ಬಳ್ಳಿ ಮತ್ತು ಮಗಳು ಆರತಿ ಯಾನೆ ಮಾಸಾಬಿ(34ವ) ಯನ್ನು ಪೊಲೀಸರು ಬಂಧಿಸಿ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ನ.26ರಂದು ಹಾಜರುಪಡಿಸಿದ್ದಾರೆ.
ಆರೋಪಿ ಪರ ವಕೀಲರು ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿದ್ದು,ಅದರ ವಿಚಾರಣೆ ನ.29ಕ್ಕೆ ಮುಂದೂಡಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶ ವಿಜಯೇಂದ್ರ ಟಿ ಹೆಚ್ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಆರೋಪಿಗಳನ್ನು ಕೂಡಲೇ ಸೆರೆ ಹಿಡಿಯುವಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸುಬ್ಬಾಪುರ್ ಮಠ್, ಧರ್ಮಸ್ಥಳದ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ್, ಹೆಡ್ ಕಾನ್ಸ್ಟೇಬಲ್ ರಾಜೇಶ್, ಪ್ರಶಾಂತ್ ,ಸಂದೀಪ್, ಪ್ರಮೋದಿನಿ, ಸುನಿತಾ, ಸೌಭಾಗ್ಯ, ಮಲ್ಲಿಕಾರ್ಜುನ , ,ಮಂಜುನಾಥ್ ಪಾಟೀಲ್, ದೀಪಾ,ಆಶಾ ತ ಸಹಕರಿಸಿದ್ದಾರೆ.

Exit mobile version