ಕೊಕ್ಕಡ: ನಾಡಿನ ಪ್ರಸಿದ್ದ ಯಾತ್ರಾ ಸ್ಥಳ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭಾರತೀಯ ಜೀವ ವಿಮಾ ನಿಗಮ (ಎಲ್ಐ ಸಿ) ಉಡುಪಿ ವಿಭಾಗದಿಂದ ಯಾತ್ರಾರ್ಥಿಗಳ ಸುಗಮ ಸಂಚಾರಕ್ಕಾಗಿ ಸ್ಟೀಲ್ ತಡೆಗೇಟುಗಳು ಹಾಗೂ ಬೃಹತ್ ಗೋಡೆ ಗಡಿಯಾರವೊಂದನ್ನು ಕೊಡುಗೆಯಾಗಿ ನೀಡಲಾಯಿತು.
ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳನ್ನೊಳಗೊಂಡ ದ. ಮ. ವಲಯದ ಮುಖ್ಯಸ್ಥ ಪುನೀತ್ ಕುಮಾರ್ ಕೊಡುಗೆ ವ್ಯವಾಸ್ತಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯರಿಗೆ ಹಸ್ತಾಂತರಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
ಎಲ್. ಐ. ಸಿ ಉಡುಪಿ ವಿಭಾಗಾಧಿಕಾರಿ ಗಣಪತಿ ಯನ್ ಭಟ್, ಮಾರ್ಕೆಟಿಂಗ್ ಮ್ಯಾನೇಜರ್ ಬಿಜು ಜೋಸೆಫ್, ಸೇಲ್ಸ್ ಮ್ಯಾನೇಜರ್ ದುರ್ಗಾರಾಮ್ ಶೆಣೈ, ಬೆಳ್ತಂಗಡಿ ಶಾಖೆಯ ಮ್ಯಾನೇಜರ್ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು.
ದೇವಳದ ವತಿಯಿಂದ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಎಲ್. ಐ. ಸಿ ಜೆಡ್. ಎಂ. ಮತ್ತು ಇ. ಡಿ ಪುನೀತ್ ಕುಮಾರ್ ಮತ್ತು ಡಿ. ಎಂ. ಗಣಪತಿ ಭಟ್ಟರನ್ನು ಗೌರವಿಸಲಾಯಿತು.Vಅರ್ಚಕ ಸುಬ್ಬಣ್ಣ ಸ್ವಾಗತಿಸಿ, ವ್ಯ. ಸ. ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಧನ್ಯವಾದ ಸಲ್ಲಿಸಿದರು.

