ತೆಕ್ಕಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2026ನೇ ವರ್ಷದ ಕ್ಯಾಲೆಂಡರ್ ನ್ನು ನ.26ರಂದು ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ಬಿ., ಉಪಾಧ್ಯಕ್ಷ ಶೇಖರ ಪೂಜಾರಿ, ನಿರ್ದೇಶಕರಾದ ಅಬ್ದುಲ್ ರಹಿಮಾನ್, ಅಬ್ದುಲ್ ಮುನೀರ್, ಎಸ್.ಬಿ.ಇಬ್ರಾಹಿಂ, ಸತೀಶ್ ಪೂಜಾರಿ ಬಿ, ಕೃಷ್ಣಪ್ಪ ಮೂಲ್ಯ, ರವಿ, ವಸಂತಿ, ಇನಾಸ್ ರೋಡ್ರಿಗಸ್, ರಾಜೇಶ್ವರಿ ರಮೇಶ್, ಝೀನತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಅಡಪ ಉಪಸ್ಥಿತರಿದ್ದರು.

