ನಾರಾವಿ: ಡಾ. ಹೆಗ್ಗಡೆಯವರ ಜನ್ಮದಿನ ಹಿನ್ನೆಲೆಯಲ್ಲಿ ನಾರಾವಿ ವಲಯದ ಕೊಕ್ರಾಡಿ/ಸಾವ್ಯ ಕಾರ್ಯಕ್ಷೇತ್ರದ ಕೊಕ್ರಾಡಿ ಅಂಡೆಕುಕ್ಕು ಎಂಬಲ್ಲಿ ವಾಸವಾಗಿರುವ ಸೀತಾರಾಮರವರ ಪತ್ನಿ ಜಯಂತಿ ವಿಶೇಷ ಚೇತನರಿಗೆ ಯೋಜನೆಯಯಿಂದ ವೀಲ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ವಾಲಜಾ ಗ್ರಾಮದ ಗಣ್ಯರಾದ ಜಿನೇಶ್ಚಂದ್ರ ಬಳ್ಳಾಳ್, ಮೂಡುಬೈಲು ಗುತ್ತು ಕೊಕ್ರಾಡಿ ವಲಯದ ಮೇಲ್ವಿಚಾರಕಿ ವಿಶಾಲ ಕೆ., ನಿಕಟಪೂರ್ವ ಅಧ್ಯಕ್ಷ ಕಿಟ್ಟಣ ಆಚಾರ್ಯ, ಸೇವಾ ಪ್ರತಿನಿಧಿ ಶಶಿಧರ ಕೆ. ಕುಲಾಲ್, ಒಕ್ಕೂಟ ಪದಾಧಿಕಾರಿ ರಾಧಿಕಾ ಹಾಗೂ ಜಯಂತಿರವರ ಮಕ್ಕಳು, ತಾಯಿ, ತಂಗಿ ಉಪಸ್ಥಿತರಿದ್ದರು.
ನಾರಾವಿ: ವೀಲ್ ಚೇರ್ ಹಸ್ತಾಂತರ

