ನಾರಾವಿ: ವಲಯ ಕುತ್ಲೂರು ಒಕ್ಕೂಟದ ಸದಸ್ಯರಾದ ವನಿತಾ ಅವರ ಗಂಡ ಕೃಷ್ಣಪ್ಪರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಮಂಗಲ ಕಾರ್ಯಕ್ರಮದಡಿ ಔಟ್ ಸೈಡ್ ವೀಲ್ ಚೇರನ್ನು ಒಕ್ಕೂಟದ ಅಧ್ಯಕ್ಷ ಸಂತೋಷ್ ಕಾಂತ ಬೆಟ್ಟು ಅವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು. ವಲಯ ಮೇಲ್ವಿಚಾರಕ ವಿಶಾಲ, ಶೌರ್ಯ ವಿಪತ್ತು ಘಟಕದ ಸದಸ್ಯರಾದ ಅಣ್ಣಿ ಎಂ.ಕೆ., ಕರಿಯ ಪೂಜಾರಿ, ಸಂತೋಷ್ ಮರ್ದೊಟ್ಟು, ಕೊಕ್ರಾಡಿ ಸಾವ್ಯ ಸೇವಾ ಪ್ರತಿನಿಧಿ ಶಶಿಧರ್ ಕುಲಾಲ್ ಕುತ್ಲೂರು ಸೇವಾ ಪ್ರತಿನಿಧಿ ಉಷಾ ಉಪಸ್ಥಿತರಿದ್ದರು.
ನಾರಾವಿ: ವೀಲ್ ಚೇರ್ ವಿತರಣೆ

