ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ. 26ರಂದು ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋರವರು ಮಾತನಾಡುತ್ತಾ, “ಸಂವಿಧಾನದಲ್ಲಿ ಅಳವಡಿಸಿರುವ ಸಮಾನತೆ, ಮೂಲಭೂತ ಕರ್ತವ್ಯಗಳನ್ನು ನಾವು ಅರಿತು ಪಾಲಿಸಬೇಕು” ಎಂದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಸಂವಿಧಾನವನ್ನು ಪಾಲಿಸುವ ಪ್ರತಿಜ್ಞಾವಿಧಿಯನ್ನು ಕೈಗೊಂಡರು.
ವಿದ್ಯಾರ್ಥಿನಿ ವಿಯೋಲ ಡಿ ಸೋಜಾ ಅವರು ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಸಹ ಶಿಕ್ಷಕಿ ರೆನಿಟಾ ಲಸ್ರಾದೊ ಮತ್ತು ಎಲ್ವಿಟ ಪಾಯ್ಸ್ ಸಹಕರಿಸಿದರು. ವಿದ್ಯಾರ್ಥಿನಿ ರಿಯೋನ ಸಿಕ್ವೇರಾ ಕಾರ್ಯಕ್ರಮವನ್ನು ನಿರೂಪಿಸಿದರು.

