ಬೆಳ್ತಂಗಡಿ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಬೆಳ್ತಂಗಡಿ ಶಾಖೆ ಉದ್ಘಾಟನೆ ಸಮಾರಂಭ ನ.26 ರಂದು ಬೆಳ್ತಂಗಡಿ ಚರ್ಚ್ ಕ್ರಾಸ್‌ನ ಟ್ರನಿಟ್ ಕಾಂಪ್ಲೆಕ್ಸ್ ಬಳಿ ನಡೆಯಿತು.
ಮಂಗಳೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಸ್ವಾಮೀಜಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಉದ್ಘಾಟನೆ ಮಾಡಿದರು. ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೇರಿಮಾರು, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಡಿ.ಬಿ ಬಾಲಕೃಷ್ಣ ಗೌಡ, ಬೆಳ್ತಂಗಡಿ ತಾಲೂಕು ಒಕ್ಕಲಿಗರ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಶ್ರೀನಿವಾಸ್ ಗೌಡ ಬೆಳಾಲು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಭಾರತಿ ಜಿ ಭಟ್, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಂದನ್ ಬಿ.ಎಸ್, ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ನಿರ್ದೇಶಕ ಸೌಮ್ಯಲತಾ, ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಜೊತೆ ಕಾರ್ಯದರ್ಶಿ ದಾಮೋದರ್ ಗೌಡ ಸುರಳಿ, ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಜೊತೆ ಕಾರ್ಯದರ್ಶಿ ಸೂರಜ್ ಗೌಡ ವಳಂಬ್ರ, ವಕೀಲ ನವೀನ್ ಗೌಡ ಉಪಸ್ಥಿತರಿದ್ದರು.
ಸನ್ಮಾನ: ಕಟ್ಟಡಕ್ಕೆ ಸ್ಥಳಾವಕಾಶ ಕಲ್ಪಿಸಿಕೊಟ್ಟ ಶೈಲಾ ಡಿಸೋಜಾ ಮತ್ತು ಸಹಕಾರಿಯಲ್ಲಿ ಪ್ರಥಮ ವ್ಯವಹಾರ ಮಾಡಿದ ಬಿ ಅಬ್ದುಲ್ ಸತಾರ್, ಗಣೇಶ್ ಭಟ್, ಸುಕೇಶ್ ಗೌಡ ಕುಕ್ಕಿಮಾರ್, ಭಾಸ್ಕರ್ ರೈ ಅವರನ್ನು ಸನ್ಮಾನಿಸಲಾಯಿತು.
ಸಂಘದ ಸಿಬ್ಬಂದಿ ಅನುಪಮಾ ಸತೀಶ್ ಗೌಡ ಪ್ರಾರ್ಥನೆ ಮಾಡಿದರು. ಸಂಘದ ಅಧ್ಯಕ್ಷ ರಂಜನ್ ಜಿ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭವ್ಯ ಸುರೇಂದ್ರ ಗೌಡ ಹಾಗೂ ಹರಿಣಾಕ್ಷಿ ರತ್ನಾಕರ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ ಧನ್ಯವಾದವಿತ್ತರು.

