Site icon Suddi Belthangady

ಕೆ-ಸೆಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ ವಿದ್ಯಾಮಾತಾ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ( K-SET ) 2025ರಲ್ಲಿ ವಿದ್ಯಾಮಾತಾ ಅಕಾಡೆಮಿಯು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. ಕಳೆದ ಮೂರು ವರ್ಷಗಳಿಂದ K- SET ತರಬೇತಿಯನ್ನು ಆನ್ಲೈನ್ ಲೈವ್ ತರಗತಿಗಳ ಮೂಲಕ ತರಬೇತಿ ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಸಂಸ್ಥೆಯೊಂದು ಉನ್ನತ ಸಾಧನೆಯನ್ನು ಮಾಡುತ್ತಿದೆ. ಕರಾವಳಿ ಭಾಗದಲ್ಲಿ ಸರಕಾರಿ ನೇಮಕಾತಿಗಳು ಮತ್ತು ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಪ್ರತಿಷ್ಠಿತ ಸಂಸ್ಥೆಯಾಗಿ ವಿದ್ಯಾಮಾತಾ ಅಕಾಡೆಮಿಯು ಮನೆಮಾತಾಗಿದೆ.

K – SET 2025ರ ಪರೀಕ್ಷೆಯಲ್ಲಿ ವಿದ್ಯಾಮಾತಾ ಅಕಾಡೆಮಿಯ ಐದು ಜನ ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಪುತ್ತೂರು ಸಾಮೆತಡ್ಕ ನಿವಾಸಿ ಲ್ಯಾನ್ಸಿ ಮಸ್ಕರೇನಸ್ ಅವರ ಪತ್ನಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಿಯಾಲತಾ ಡಿ. ಸಿಲ್ವಾ, ಕಡಬ ತಾಲೂಕು ಏನೆಕಲ್ಲು ಬಚ್ಚನಡ್ಕ ನಿವಾಸಿ ದಿನಕರ ಗೌಡ ಮತ್ತು ವಾರಿಜಾ ದಂಪತಿಗಳ ಪುತ್ರಿ ಧನ್ಯಶ್ರೀ ಬಿ., ಬೆಂಗಳೂರು ಉತ್ತರಹಳ್ಳಿ ನಿವಾಸಿ ಪ್ರವೀಣ್ ಕುಮಾರ್ ಅವರ ಪತ್ನಿ ಬೆಂಗಳೂರು ಆರ್.ಎನ್.ಎಸ್ ಪಿಯು ಕಾಲೇಜ್ ಆರ್.ಆರ್.ನಗರದಲ್ಲಿ ಉಪನ್ಯಾಸಕಿ ಆಗಿರುವ ವಿದ್ಯಾಶ್ರೀ, ಹಾಸನ ಜಿಲ್ಲೆ, ನರಸೀಪುರ ಮಾಯಾ ಗೌಡನಹಳ್ಳಿ ನಿವಾಸಿ ಮಂಜುನಾಥ ಎಂ.ವಿ. ಅವರ ಪತ್ನಿ ಪ್ರಿಯಾಂಕಾ ಕೆ.ಎಸ್. ಹಾಗೂ ಸುಳ್ಯ ತಾಲೂಕು ಮಡಪ್ಪಾಡಿ ಪಣಿಯಾಳ ನಿವಾಸಿ ವಿಪಿನ್ ಎಂ. ಅವರ ಪತ್ನಿ ಶಾಲಿನಿ ಎ.ಜೆ. ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದಿರುತ್ತಾರೆ.

ಕೆ- ಸೆಟ್ ನಿಂದ ಆಗುವ ಪ್ರಯೋಜನಗಳು: ಕೆ-ಸೆಟ್ ಅರ್ಹತೆ ಪಡೆದರೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. ಕೆ ಸೆಟ್ ಅರ್ಹತೆ ಪಡೆದವರು UGC-NET ಅರ್ಹತೆಯನ್ನು ಪಡೆದರೆ ಆಲ್ ಓವರ್ ಇಂಡಿಯಾ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು. ಸರಕಾರಿ ಸ್ವಾಮ್ಯದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಡೈಲಿ ವೇಜಸ್, ಪಾರ್ಟ್ ಟೈಮ್ ಗೆ ಮೊದಲ ಆದ್ಯತೆಯನ್ನು ಕೂಡ ಪಡೆಯಬಹುದು.ತರಬೇತಿ ಪಡೆದು ಕೆ -ಸೆಟ್ ಅರ್ಹತೆ ಪಡೆದಿರುವ ಎಲ್ಲಾ ಅಭ್ಯರ್ಥಿಗಳನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಮತ್ತು ಆಡಳಿತ ಮಂಡಳಿ ಅಭಿನಂದಿಸಿದೆ. ತರಬೇತಿ ಪಡೆಯಲು ಆಸಕ್ತಿಯುಳ್ಳ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯ ಸಂಪರ್ಕ ಸಂಖ್ಯೆ 9620468869 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Exit mobile version