Site icon Suddi Belthangady

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ನಾಳ ಮುಗುಳಿಯ ದಿನೇಶ್ ಶೆಟ್ಟಿ ಅಲಿಯಾಸ್ ದಿನ್ನು ಬಂಧನ

ಮಂಗಳೂರು:ಕೊಲೆ ಪ್ರಕರಣ, ಸುಳಿಗೆ ಪ್ರಕರಣದ ಆರೋಪಿ, ಕಳೆದ ಕೆಲ ವರುಷಗಳಿಂದ ತಲೆಮರೆಸಿಕೊಂಡಿದ್ದ ನಾಳದ ಮುಗುಳಿ ಹೊಸಮನೆಯ ಟಿ. ದಿನೇಶ್ ಶೆಟ್ಟಿ ಅಲಿಯಾಸ್ ದಿನ್ನುನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಅದರಂತೆ ” ಟಿ.ದಿನೇಶ್ ಶೆಟ್ಟಿ @ ದಿನ್ನು ತಂದೆ: ತಿಮ್ಮಪ್ಪ ಶೆಟ್ಟಿ ವಾಸ: ಮುಗಳಿ ಹೊಸ ಮನೆ ನಾಯರ್ ತರ್ಪು ನಾಲಾ ಅಂಚೆ ಬೆಳ್ತಂಗಡಿ ದ ಕ ಜಿಲ್ಲೆ ಎಂಬವನು ಮಂಗಳೂರು ದಕ್ಷಿಣ ಠಾಣಾ ಅಕ್ರ ಸಂಖ್ಯೆ 144/2009 ರ ಕೊಲೆ ಪ್ರಕರಣದಲ್ಲಿ ಭೂಗತ ಲೋಕದ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೊಗೀಶ್ ರವರಿಂದ ಸುಪಾರಿ ಪಡೆದು ನ್ಯಾಯವಾದಿ ಖಾಸೀಂ ನೌಷಾದ್ ನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಮಾನ್ಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು.

ಅದರಲ್ಲಿ 11 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿ ನಂತರ ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಅಫೀಲು ಸಲ್ಲಿಸಿ ಡಿಸೆಂಬರ್ 2019 ರಲ್ಲಿ ಬಿಡುಗಡೆಗೊಂಡಿರುತ್ತಾನೆ.

ನತಂರದ ದಿನಗಳಲ್ಲಿ ಕಾವೂರು ಠಾಣೆಯ ಅಕ್ರ ಸಂಖ್ಯೆ 01/2019 ರ ಅಪಹರಣ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆ ಅಕ್ರ ಸಂಖ್ಯೆ 88/2022 ರ ವಂಚನೆ ಪ್ರಕರಣ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆ ಅಕ್ರಮ ಸಂಖ್ಯೆ 06/2023ರ ಸುಲಿಗೆ ಪ್ರಕರಣಗಳಲ್ಲಿಯೂ ಭಾಗಿಯಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂದೂವರೆ ವರ್ಷದಿಂದ ತಲೆ ಮೆರೆಸಿಕೊಂಡವನನ್ನು ದಿನಾಂಕ:25-11-2025 ರಂದು ಎಸಿಪಿ ಉತ್ತರ ಉಪವಿಭಾಗ ಹಾಗೂ ಅವರ ತಂಡ ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ.” ಎಂದು ತಿಳಿಸಲಾಗಿದೆ.

Exit mobile version