Site icon Suddi Belthangady

ಬೆಳ್ತಂಗಡಿ: ಶ್ರೀ ಧ.ಮಂ.ಆಂ.ಮಾ. ಶಾಲೆಯಲ್ಲಿ ಡಾ. ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥ ಶಾಲೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಸಿರಿ ಗ್ರಾಮೋದ್ಯೋಗದ ಜನರಲ್ ಮ್ಯಾನೇಜರ್ ಜೀವನ್ ಕುಮಾರ್ ಶೆಟ್ಟಿ ಅವರು ಆಗಮಿಸಿ, ಹೆಗ್ಗಡೆಯವರ ಗುರಿ ಅಭಿವೃದ್ಧಿ, ಏಳಿಗೆ ಬಗ್ಗೆ ತಿಳಿಯಪಡಿಸಿದರು.

ಭಾಷಣ, ಡ್ರಾಯಿಂಗ್, ಗ್ರೀಟಿಂಗ್ ಕಾರ್ಡ್ ತಯಾರಿ ಸ್ಪರ್ಧೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್. ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಕೇಂದ್ರ ಬಿಂದುವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಕ್ಷಕರಾದ ಸೌಮ್ಯ ಪಿ., ಸಹನಾ ಅಮಿತಾ, ಪ್ರವೀಣ್ ಎನ್., ನೀತಾ ಶ್ರೇಯಾಂಸ ಜೈನ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರ ಸಹಕರಿಸಿದರು. ನೀತಾ ಸ್ವಾಗತಿಸಿದರು. ಶಿಕ್ಷಕ ಶ್ರೇಯಾಂಸ ಜೈನ್ ನಿರೂಪಣೆಯನ್ನು ನೆರವೇರಿಸಿದರು. ಅಮಿತಾ ಧನ್ಯವಾದವಿತ್ತರು.

Exit mobile version