Site icon Suddi Belthangady

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸಂಘಟನೆಗಳಿಂದ ಕಲ್ಪವೃಕ್ಷ ಗಿಡನಾಟಿ ಹಾಗೂ ಗುರುವಾಯನಕೆರೆಯ ಬೃಹತ್ ಕೆರೆಯ ಸ್ವಚ್ಛತಾಕಾರ್ಯಕ್ರಮ

ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಹಾಗೂ ಗುರುವಾಯನಕೆರೆ ಸ.ಹಿ.ಪ್ರಾ ಶಾಲೆ, ಶೌರ್ಯ ವಿಪತ್ತು ಘಟಕ, ಸಂಯುಕ್ತ ಆಶ್ರಯದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಕಲ್ಪವೃಕ್ಷ ಗಿಡನಾಟಿ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಣೆ ಮಾಡಲಾಯಿತು.

ಅದೇ ರೀತಿ, ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್, ಶೌರ್ಯ ವಿಪತ್ತು ಘಟಕ ಗುರುವಾಯನಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾಯನಕೆರೆಯ ಸುತ್ತ ಮುತ್ತ ಹಾಗೂ ಬೃಹತ್ ಕೆರೆಯ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬೆಳ್ತಂಗಡಿ ಮಂಡಲ ಶಶಿರಾಜ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮಮತಾ ಶೆಟ್ಟಿ,‌ ಪಂಚಾಯತ್ ಸಿಬ್ಬಂದಿ ಆನಂದ್ ಕೋಟ್ಯಾನ್, ತಾಲೂಕಿನ ಯೋಜನಾಧಿಕಾರಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಲತಿಫ್, ಶಾಲಾ ಶಿಕ್ಷಕರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಯವರು, ಶೌರ್ಯವಿಪತ್ತು ಘಟಕದ ಸದಸ್ಯರು, ಮಹಿಳಾ ಐಟಿಐ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಕಾಮತ್, ಪಂಚಾಯತ್ ಸದಸ್ಯ ಮಂಜುನಾಥ, ತಾಲೂಕು ಯೋಜನಾಧಿಕಾರಿ ಅಶೋಕ ಬಿ ಹಾಗೂ ಯೋಜನೆಯ ಸಿಬ್ಬಂದಿ ವರ್ಗ, ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು, ಗುರುವಾಯನಕೆರೆ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Exit mobile version