ವೇಣೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜನ ಜಾಗೃತಿ ತಾಲೂಕು ಕೋಶಾಧಿಕಾರಿ ಗಿರೀಶ್ ಕೆ. ಎಸ್. ಪಾದಯಾತ್ರೆಯ ಸಮಿತಿ ಅಧ್ಯಕ್ಷ ಜಯಶಂಕರ್ ಹೆಗ್ಡೆ, ಒಕ್ಕೂಟದ ಅಧ್ಯಕ್ಷರು, ಮೇಲ್ವಿಚಾರಕರು, ಸೇವಾಪ್ರತಿನಿಧಿ ಗಳು ಮತ್ತು ಒಕ್ಕೂಟದ ಪದಾಧಿಕಾರಿಗಳ ನೇತೃತ್ವದಲ್ಲಿ ದೇವರಿಗೆ ಸರ್ವ ಸೇವೆ ಮತ್ತು ರುದ್ರಾಭಿಷೇಕ ಪೂಜೆ ನಡೆಸಿದರು.
ಡಾ. ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ವೇಣೂರು ದೇವಸ್ಥಾನದಲ್ಲಿ ರುದ್ರಾಭಿಷೇಕ

