ವೇಣೂರು: ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ನ ಸದಸ್ಯರು ಹಾಗೂ ಹಿತೈಷಿಗಳಿಂದ ವೇಣೂರು ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪವನ್ ಎಂಬ ವಿದ್ಯಾರ್ಥಿಗೆ ಆರೋಗ್ಯ ನಿಮಿತ್ತ ಆಸ್ಪತ್ರೆಗೆ ತೆರಳಿ ಆರ್ಥಿಕ ನೆರವು ನೀಡಿದರು. ಟ್ರಸ್ಟ್ ಅಧ್ಯಕ್ಷ ವಿಜಯ ಗೌಡ, ಕಾರ್ಯದರ್ಶಿ ಯೋಗೀಶ್ ಬಿಕ್ರೊಟ್ಟು, ಕೋಶಾಧಿಕಾರಿ ಪ್ರಶಾಂತ್ ಹೆಗ್ಡೆ, ಟ್ರಸ್ಟಿಗಳಾದ ನೇಮಯ್ಯ ಕುಲಾಲ್, ಕಾರ್ತಿಕ್, ಗಿರೀಶ್ ಕೆ. ಎಸ್. ಉಪಸ್ಥಿತರಿದ್ದರು.
ವೇಣೂರು: ಯುವ ಸೇವಾ ಸಂಗಮದಿಂದ ವಿದ್ಯಾರ್ಥಿ ಪವನ್ ರಿಗೆ ವೈದ್ಯಕೀಯ ನೆರವು

