ಕಳೆಂಜ: ಗ್ರಾಮದ ಶಿಬರಾಜೆ, ಕುಕ್ಕಾಜೆ ಮನೆಯ ಕುಶಾಲಪ್ಪ ನಾಯ್ಕರು ಅನಾರೋಗ್ಯದಿಂದ ನ.13ರಂದು ನಿಧನರಾಗಿದ್ದು, ಅವರ ಮನೆಗೆ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ನ.24ರಂದು ಭೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.
ಬೂತ್ ಅಧ್ಯಕ್ಷ ಹರೀಶ್ ಕುಮಾರ್ ವಳಗುಡ್ಡೆ, ನಿಡ್ಲೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ, ಬೂತ್ ಮಾಜಿ ಅಧ್ಯಕ್ಷ ಪ್ರವೀಣ್ ಗೌಡ ಬಟ್ಯಾಲು, ಕಾರ್ಯದರ್ಶಿ ದಯಾನಂದ ಕುಕ್ಕಾಜೆ, ಹರೀಶ್ ನೆಕ್ಕರಾಜೆ, ಗಂಗಾಧರ ಗೌಡ ಪಲ್ಲದ ಮೂಲೆ, ಹಾಗೂ ಮನೆಯವರು ಉಪಸ್ಥಿತರಿದ್ದರು.

