ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಎಸ್.ಐ.ಟಿ.ಅಧಿಕಾರಿಗಳಿಂದ ಬಂಧಿತನಾಗಿ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯ ಜನ ಗೆ ಜಿಲ್ಲಾ ಸೆಷೆನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತುಹಾಕಿಸಲಾಗಿದೆ ಎಂದು ದೂರು ನೀಡಿದ ಬಳಿಕ ಸಾಕ್ಷಿ ದೂರುದಾರನಾಗಿ ಉತ್ಖನನಕ್ಕೆ ಕಾರಣವಾಗಿದ್ದ ಚಿನ್ನಯ್ಯನನ್ನು ಬಳಿಕ ಆರೋಪಿಯನ್ನಾಗಿ ಹೆಸರಿಸಿ ಬಂಧಿಸಲಾಗಿತ್ತು. ಬಳಿಕ ಆತನ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು.
ಇದೀಗ ಆತನ ಜಾಮೀನು ಅರ್ಜಿ ಜಿಲ್ಲಾ ನ್ಯಾಯಾಲಯದಲ್ಲಿ ಪುರಸ್ಕೃತಗೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ. 12 ಷರತ್ತುಗಳನ್ನಿಟ್ಟು ಜಾಮೀನು ಮಂಜೂರುಗೊಂಡಿದ್ದು,1 ಲಕ್ಷ ಬಾಂಡ್ ಇಡಲು ತಿಳಿಸಲಾಗಿದೆ. ಈ ಮಧ್ಯೆ ಬೆಳ್ತಂಗಡಿ ನ್ಯಾಯಾಲಯದಲ್ಲಿಯೂ ವಾದ ಪ್ರತಿವಾದ ನಡೆದಿತ್ತು.

