Site icon Suddi Belthangady

ಧರ್ಮಸ್ಥಳ: ವಿಜಯ ಕ್ರೆಡಿಟ್ ಸೊಸೈಟಿಗೆ ಡಿ. ಹರ್ಷೇಂದ್ರ ಕುಮಾ‌ರ್ ಭೇಟಿ

ಧರ್ಮಸ್ಥಳ: ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಧರ್ಮಸ್ಥಳ ಶಾಖೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ನ. 24ರಂದು ನೀಡಿದರು. ವಿಜಯ ಕ್ರೆಡಿಟ್ ಸೊಸೈಟಿಯನ್ನು ವೀಕ್ಷಿಸಿ, ಸೊಸೈಟಿ ಗ್ರಾಹಕರಿಗೆ ನೀಡುತ್ತಿರುವ ಸಾಲ ಸೌಲಭ್ಯ ಹಾಗೂ ವ್ಯವಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸೊಸೈಟಿ ಅಧ್ಯಕ್ಷ ಅಜಿತ್‌ ಜಿ. ಶೆಟ್ಟಿ, ಸಿಇಒ ಸುಜಯ್ ಶೆಟ್ಟಿ, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಶ್ರಮ, ಸದಸ್ಯರ ಸಹಕಾರದ ಫಲವಾಗಿ ಸಂಸ್ಥೆಯು ಉತ್ತಮವಾಗಿ ಬೆಳೆಯುತ್ತಿದೆ ಎಂದರು.

ವಿಜಯ ಕ್ರೆಡಿಟ್ ವತಿಯಿಂದ ಡಿ.ಹರ್ಷೇಂದ್ರ ಕುಮಾ‌ರ್ ಅವರನ್ನು ಗೌರವಿಸಲಾಯಿತು. ಸೊಸೈಟಿ ಉಪಾಧ್ಯಕ್ಷ ಜಯಂತ್‌ ಶೆಟ್ಟಿ ಕುಂಠಿನಿ,ನಿರ್ದೇಶಕರಾದ ಜಯರಾಮ ಭಂಡಾರಿ, ಶಾಖಾ ವ್ಯವಸ್ಥಾಪಕ ಅಶೋಕ್‌, ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version