ಉಜಿರೆ: ಬೆಳ್ತಂಗಡಿ ಶಾಲಾ ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಳಪೇಟೆಯ ಸಹಭಾಗಿತ್ವದಲ್ಲಿ ಕೊಕ್ಕಡ ವಲಯ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿ ಸ್ಪರ್ಧೆಯು ನ. 21ರಂದು ನಡೆಯಿತು.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮಸ್ಥಾನ ಗಳಿಸಿದವರು: ದಿಶಿಕ ಶೆಟ್ಟಿ (ಕನ್ನಡ ಕಂಠಪಾಠ) ಯೋರವ್ ಜೆ. (ಇಂಗ್ಲಿಷ್ ಕಂಠಪಾಠ) ಜಿ.ಪಿ.ಯುಕ್ತ (ಭಕ್ತಿಗೀತೆ).
ದ್ವಿತೀಯ ಸ್ಥಾನಗಳಿಸಿದವರು: ಸಾತ್ವಿಕ್ ಎಂಆರ್ (ಸಂಸ್ಕೃತ ಪಠಣ), ಖುಷಿ ಆರ್.ಎನ್. (ದೇಶಭಕ್ತಿ ಗೀತೆ) ಹಿಬಾಫಾತಿಮಾ (ಅಭಿನಯ ಗೀತೆ) ಹೃಕೇಶ್ (ಚಿತ್ರಕಲೆ) ಪ್ರಣತಿಗೌಡ (ಕ್ಷೇ ಮಾಡಲಿಂಗ್).
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದವರು: ಪುಷ್ಟಿ (ಕವನವಾಚನ) ಸುಹಾನ್ (ಹಿಂದಿ ಕಂಠಪಾಠ) ರಿಶೀತ್ (ಕ್ಷೇ ಮಾಡಲಿಂಗ್) ಅಮೋಫ್ ಆರ್ ಶೆಟ್ಟಿ (ದೇಶಭಕ್ತಿ ಗೀತೆ).
ದ್ವಿತೀಯಸ್ಥಾನ ಗಳಿಸಿದವರು: ರಕ್ಷಾ ಪಂಡಿತ್ (ಭಕ್ತಿಗೀತೆ) ಆಕೃತಿರಾವ್ (ಸಂಸ್ಕೃತ ಪಠಣ)ನಂದನ್ (ಚಿತ್ರಕಲೆ)
ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದವರು: ರಿಷಲ್ ಫರ್ನಾಂಡಿಸ್ (ಇಂಗ್ಲಿಷ್ ಭಾಷಣ) ಸಾಕ್ಷಿ(ಹಿಂದಿ ಭಾಷಣ).
ದ್ವಿತೀಯ ಸ್ಥಾನ ಗಳಿಸಿದವರು: ಆದಿತಿ (ಭರತನಾಟ್ಯ) ಸೈಯದ್ ಸಭಾವುದ್ದೀನ್ (ಗಝಲ್) ಅಂಶಿಕ (ಕವನ ವಾಚನ) ಪ್ರಧಾನ್‌ಋತ್ವಿಕ್ (ರಸಪ್ರಶ್ನೆ) ನವ್ಯಶ್ರೀ (ರಂಗೋಲಿ).
ವಿಜೇತ ವಿದ್ಯಾರ್ಥಿಗಳನ್ನು ಸಂಚಾಲಕರು, ಪ್ರಾಂಶುಪಾಲರು, ಅಧ್ಯಾಪಕವೃಂದ ಹಾಗೂ ಶಾಲಾಭಿವೃದ್ಧಿ ಮಂಡಳಿಯವರು ವಿಶೇಷವಾಗಿ ಅಭಿನಂದಿಸಿದರು.

