ಕಾಶಿಪಟ್ಣ: ಗ್ರಾಮ ಪಂಚಾಯತ್ ಅಧ್ಯಕ್ಷ, ಪೆರಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, 2025ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕಾರಗೊಂಡಿರುವ ಸತೀಶ್ ಕಾಶಿಪಟ್ಣ ಅವರನ್ನು ನ. 24ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ಶುಭವಿ, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಶಿಲ್ಪಾ, ಸದಸ್ಯರಾದ ಸುಶೀಲಾ, ಸವಿತಾ, ಅಶೋಕ್ ಕುಮಾರ್ ಜೈನ್, ರವೀಂದ್ರ, ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ, ಕಾರ್ಯದರ್ಶಿ ಲೀನಾ ಬೆನೆಡಿಕ್ಟ್ ಲೋಬೊ, ಕಾಶಿಪಟ್ಣ ನಿವೃತ್ತ ಅಭಿವೃದ್ಧಿ ಅಧಿಕಾರಿ ವಾಸುದೇವ ನಾಯಕ್, ಮನೋಜ್ ಕುಮಾರ್, ಜಲ ಜೀವನ್ ಇಂಜಿನಿಯರ್ ಶರತ್, ಯೋಜನಾ ವ್ಯವಸ್ಥಾಪಕ ಅಧಿಕಾರಿ ವಿಗ್ನೇಶ್ ರಾಜ್, ವರ್ಲ್ಡ್ ಬ್ಯಾಂಕ್ ಅಶ್ಮಿತಾ, ಮೆಸ್ಕಾಂ ಇಂಜಿನಿಯರ್ ಗಣೇಶ್ ನಾಯಕ್, ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

