Site icon Suddi Belthangady

ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ: ಧರ್ಮಸ್ಥಳ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಗೆ ಬಹುಮಾನ

ಧರ್ಮಸ್ಥಳ: ಉಜಿರೆ ಎಸ್. ಡಿ. ಎಂ. ಸೆಕೆಂಡರಿ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಧರ್ಮಸ್ಥಳ ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ. ಕನ್ನಡ ಭಾಷಣ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಅಮಿತ್, ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಕ್ಷಮ ಡಿ.ಎಚ್., ಭಾವಗೀತೆ ಸ್ಪರ್ಧೆಯಲ್ಲಿ 9ನೇ ತರಗತಿಯ ಪ್ರಾಪ್ತಿ ಶೆಟ್ಟಿ, ಗಜಲ್ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಸಜೀನಾ, ಜನಪದ ನೃತ್ಯ ಸ್ಪರ್ಧೆಯಲ್ಲಿ ಧನ್ಯಶ್ರೀ, ದ್ರಿಶಾ ಮರಿಯ, ಅನುಜ್ಞಾ ರಾವ್, ಸಿಂಚನ, ದೀಕ್ಷಾ, ಪೃಥ್ವಿ ಇವರನ್ನೊಳಗೊಂಡ ತಂಡವು, ಜೇಷ್ಠ ಶರ್ಮಾ ಹಾಗೂ ಯಶ್ವಿತ್ ಕೆ. ಇವರನ್ನೊಳಗೊಂಡ ತಂಡವು ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ನಿವೇದ್ಯಾ, ಹಿಂದಿ ಭಾಷಣ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಸಿಂಧೂರ, ಜನಪದ ಹಾಡು ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಸಾನ್ವಿ ಬಿ, ಪ್ರಬಂಧ ರಚನೆ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಮಾಧುರ್ಯ, ಎಂಟನೇ ತರಗತಿಯ ಶ್ರವಣ್ ಬಿ ಜೆ, ಕವಾಲಿ ಸ್ಪರ್ಧೆಯಲ್ಲಿ ಆದರ್ಶ್ ಎಚ್ ವೈ, ಹಿತೇಶ್ ಜೈನ್, ಸ್ವರೂಪ್, ಚಿರಂತನ್, ಕ್ಷಿತೀಶ್ ನಾವುಡಾ, ಇವರನ್ನೊಳಗೊಂಡ ತಂಡವು ದ್ವಿತೀಯ ಸ್ಥಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಹತ್ತನೇ ತರಗತಿಯ ಅನರ್ಘ್ಯ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಪೂರ್ವಿ ಭಟ್ ತೃತೀಯ ಸ್ಥಾನ ಗಳಿಸಿರುತ್ತಾರೆ.

Exit mobile version