ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಪೆರ್ವಾರು ಮನೆಯ ದಿ.ಬಾಬು ಶೆಟ್ಟಿಯವರ ಪತ್ನಿ ಗುರುವಾಯನಕೆರೆ ವೈಭವ್ ಹಾರ್ಡ್‌ವೇರ್ ಮಾಲೀಕ ಸೀತರಾಮ ಶೆಟ್ಟಿಯವರ ಸೋಮಕ್ಕ (ಲೀಲಾ ಶೆಟ್ಟಿ) (85ವ) ಅವರು ಅಲ್ಪಕಾಲದ ಅಸೌಖ್ಯದಿಂದ ನ.23ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಮಕ್ಕಳಾದ ಸೀತರಾಮ ಶೆಟ್ಟಿ, ಶೇಖರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಹರೀಶ್ ಶೆಟ್ಟಿ ಮತ್ತು ರೂಪಾ ಶೆಟ್ಟಿ ಅವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನ. 24ರಂದು ಬೆಳಿಗ್ಗೆ 8.30ಕ್ಕೆ ಪುಂಜಾಲಕಟ್ಟೆ ಪೆರ್ವಾರುವಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

