Site icon Suddi Belthangady

ಕೊಕ್ಕಡ: ಜೆಸಿಐ ಕಪಿಲಾ ಘಟಕದ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ರಿತೇಶ್ ಎಂ. ಸ್ಟ್ರೆಲ್ಲಾ ಆಯ್ಕೆ

ಕೊಕ್ಕಡ: ಜೆಸಿಐ ಕಪಿಲಾ ಘಟಕದ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ರಿತೇಶ್ ಎಂ. ಸ್ಟ್ರೆಲ್ಲಾ ಅವರು ಆಯ್ಕೆಯಾಗಿರುತ್ತಾರೆ. ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಒಡ್ರಲ್ಕೆಯ ನಿವಾಸಿ. ಸಮಾಜ ಸೇವಾ ಕ್ಷೇತ್ರದಲ್ಲಿ ಪದವೀಧರರಾಗಿದ್ದು, ವಿವಿಧೆಡೆಯ
ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಪ್ರಸ್ತುತ ಊರಿನಲ್ಲಿ ಪ್ರಗತಿ ಪರ ಕೃಷಿಕರಾಗಿರುತ್ತಾರೆ.

ಅದೇ ರೀತಿ ನೂತನ 2026ನೇ ಸಾಲಿನ ಕಾರ್ಯದರ್ಶಿಯಾಗಿ ಕೊಕ್ಕಡ ಗ್ರಾಮದ ಮರಿಯಾ ಕೃಪಾ ನಿವಾಸಿ
ಜೋಯೆಲ್ ಪಿರೇರಾ ಆಯ್ಕೆ ಆಗಿರುತ್ತಾರೆ. ಅವರು ಸಿವಿಲ್ ಎಂಜಿನಿಯರ್ ಪದವೀಧರರಾಗಿದ್ದು ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

ಇತ್ತೀಚೆಗೆ ಶಿಬರಾಜೆ ಪಾದೆ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ ಜೆಸಿಐ ಸರ್ವ ಸದಸ್ಯರ ಸಭೆಯಲ್ಲಿ ಎಲ್ಲಾ ಹೊಸ ಪದಾಧಿಕಾರಿಗಳನ್ನು ಆರಿಸಲಾಯಿತು.

ಡಾ. ಶೋಭಾ ಪಿ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಾಮಿನೇಶನ್ ಕಮಿಟಿಯ ಮುಖ್ಯಸ್ಥ, ನಿಕಟಪೂರ್ವ ಅಧ್ಯಕ್ಷ ಸಂತೋಷ್ ಜೈನ್ ಚುನಾವಣೆ ನಡೆಸಿಕೊಟ್ಟರು. ಕಾರ್ಯದರ್ಶಿ, ಪೂರ್ವ ಅಧ್ಯಕ್ಷರು, ಸದಸ್ಯರು ಭಾಗವಹಿಸಿದರು.

Exit mobile version