Site icon Suddi Belthangady

ಮೂಡುಬಿದಿರೆ: ಅಂತರ್ ಕಾಲೇಜು ಬೆಸ್ಟ್ ಫಿಸಿಕ್: ಆಳ್ವಾಸ್ ಕಾಲೇಜ್‌ಗೆ ಸಮಗ್ರ ಪ್ರಶಸ್ತಿ- ಸತತ 16ನೇ ಬಾರಿ ಪ್ರಶಸ್ತಿಯ ಗರಿ

ಬೆಳ್ತಂಗಡಿ: ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ.ವಿ. ಅಂತರ್ ಕಾಲೇಜು ದೇಹದಾಢ್ಯ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ತಂಡವು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿದೆ. ಆಳ್ವಾಸ್ ಕಾಲೇಜಿನ ಕಿಶಾನ್ ಶೆಟ್ಟಿ ಮಿ. ಯೂನಿವರ್ಸಿಟಿ ವೈಯಕ್ತಿಕ ಪ್ರಶಸ್ತಿ ಮತ್ತು ಪ್ರಥಮ್ ಮೋಸ್ಟ್ ಮಸ್ಕ್ಯುಲರ್ ಪ್ರಶಸ್ತಿಯನ್ನು ಪಡೆದುಕೊಂಡರು. 16ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version