Site icon Suddi Belthangady

ಬೆಳ್ತಂಗಡಿ: ವೃತ್ತ ನಿರೀಕ್ಷಕರಾಗಿ ರವಿ ಬಿ.ಎಸ್. ನೇಮಕ

ಬೆಳ್ತಂಗಡಿ: ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನಿವೃತ್ತಿ ಬಳಿಕ ಖಾಲಿ ಇದ್ದ ಬೆಳ್ತಂಗಡಿ ವೃತ್ತ‌ ನಿರೀಕ್ಷಕ ಸ್ಥಾನಕ್ಕೆ ಉಪ್ಪಿನಂಗಡಿ ವೃತ್ತ ನಿರೀಕ್ಚಕ ಪೊಲೀಸ್ ಠಾಣೆಯಿಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆದೇಶವಾಗಿದ್ದ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ಅವರನ್ನು ನೇಮಕ ಮಾಡಿ ನ.21ರಂದು  ಆದೇಶ ಮಾಡಲಾಗಿದೆ.

ಇನ್ಸ್‌ಪೆಕ್ಟರ್ ರವಿ ಬಿ.ಎಸ್. ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಚಿಕ್ಕಮಗಳೂರು, ಕಾರ್ಕಳ, ಸುಳ್ಯ, ಸಂಪ್ಯ, ಪುತ್ತೂರು ಗ್ರಾಮಾಂತರ ಕಡೆ ಕರ್ತವ್ಯ ನಿರ್ವಹಿಸಿ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಹೊಂದಿ ಶೃಂಗೇರಿ, ಉಪ್ಪಿನಂಗಡಿ ವೃತ್ತ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದರು.

ಇನ್ಸ್‌ಪೆಕ್ಟರ್ ರವಿ‌ ಬಿ.ಎಸ್. ಅವರ ಉತ್ತಮ ಕರ್ತವ್ಯ ನಿರ್ವಹಣೆ ಬಗ್ಗೆ ಮುಖ್ಯಮಂತ್ರಿ ಪದಕ, ರಾಷ್ಟ್ರಪತಿ ಪದಕ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಕೂಡ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

Exit mobile version