Site icon Suddi Belthangady

ಸ್ಪಂದನ ಬಂಟರ ಸೇವಾ ತಂಡದ 50ನೇ ಯೋಜನೆಯಾಗಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ

ಬೆಳ್ತಂಗಡಿ: ಕಳೆದ 3 ವರ್ಷಗಳಿಂದ ಅಶಕ್ತ ಕುಟುಂಬಗಳಿಗೆ, ಅನಾರೋಗ್ಯಪೀಡಿತರಿಗೆ 10ಲಕ್ಷಕ್ಕೂ ಮಿಕ್ಕಿ ಧನಸಹಾಯ ಮಾಡಿರುವ ತಾಲೂಕು ಸ್ಪಂದನ ಬಂಟರ ಸೇವಾ ತಂಡವು, ಇದೀಗ ತನ್ನ 50ನೇ ಸೇವಾಯೋಜನೆಯಾಗಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡಲು ಮುಂದಾಗಿದೆ. ಓಡಿಲ್ಮಾಳ ಗ್ರಾಮದ ಕಟ್ಟದಬೈಲು ನಿವಾಸಿ ಗೀತಾ ಶೆಟ್ಟಿಯರಿಗೆ ಸ್ಪಂದನ ಸೇವಾ ತಂಡವು ಮನೆ ನಿರ್ಮಾಣ ಮಾಡಿಕೊಡುತ್ತಿದ್ದು ನ.21ರಂದು ನಡೆದ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಯಮಿ ಶಶಿಧರ್‌ ಶೆಟ್ಟಿ ಬರೋಡ ನಡೆಸಿಕೊಟ್ಟರು. ಒಟ್ಟು 10ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣವಾಗುತ್ತಿದ್ದು ಬರುವ ಆರು ತಿಂಗಳ ಒಳಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಸ್ಪಂದನ ಸೇವಾ ತಂಡದ ಅಧ್ಯಕ್ಷ ಸುರೇಶ್‌ ಶೆಟ್ಟಿ ಲಾಯಿಲ ತಿಳಿಸಿದ್ದಾರೆ.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಜಯಂತ್‌ ಶೆಟ್ಟಿ ಭಂಡಾರಿಗುಡ್ಡೆ, ವಿಜಯ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಅಜಿತ್‌ ಜಿ ಶೆಟ್ಟಿ ಕೊರಿಯಾರ್‌, ಬಂಟರ ಸಂಘದ ನಿರ್ದೇಶಕರಾದ ರಾಜು ಶೆಟ್ಟಿ ಬೆಂಗತ್ಯಾರು, ಆನಂದ ಶೆಟ್ಟಿ ಐಸಿರಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್‌ ಶೆಟ್ಟಿ, ಸ್ಪಂದನ ಬಂಟರ ಸೇವಾ ತಂಡದ ಶ್ರೀನಿವಾಸ್ ಶೆಟ್ಟಿ, ಓಡಿಲ್ನಾಳ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೊಲ್ಯ, ಉಪಾಧ್ಯಕ್ಷೆ ರಂಜಿತಾ ಶೆಟ್ಟಿ, ಗೀತಾ ಶೆಟ್ಟಿ ಕುಟುಂಬಸ್ಥರು ಉಪಸ್ಥಿತರಿದ್ದರು.

ವಿಠಲ್‌ ಶೆಟ್ಟಿ ಉಪ್ಪಡ್ಕ ಕಾರ್ಯಕ್ರಮ ನಿರ್ವಹಿಸಿದರು. 

Exit mobile version