Site icon Suddi Belthangady

ಅಪಘಾತದಲ್ಲಿ ಮೃತಪಟ್ಟ ಹಂಝ ಬೆದ್ರಬೆಟ್ಟು ಕುಟುಂಬಕ್ಕೆ ಕಾಮಗಾರಿ ಗುತ್ತಿಗೆದಾರರಿಂದ ಸಾಂತ್ವನ ನಿಧಿ ಹಸ್ತಾಂತರ

ಬೆಳ್ತಂಗಡಿ: ನ.20ರಂದು ಮದ್ದಡ್ಕ ಮಸ್ಜಿದ್ ಸನಿಹ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ವಾಹನದ ಅಡಿಗೆ ಬಿದ್ದು ದಾರುಣಾವಾಗಿ ಮೃತರಾದ ಬೆದ್ರಬೆಟ್ಟು ನಿವಾಸಿ ಹಂಝ (72) ಅವರಿಗೆ ಕಾಮಗಾರಿ ಗುತ್ತಿಗೆದಾರರ ಕಡೆಯಿಂದ ಸಾಂತ್ವಾನ ನಿಧಿ ಹಸ್ತಾಂತರಿಸಲಾಯಿತು.

ಸಮಾಜ ಸೇವಕ ಅಬ್ಬೋನು ಮದ್ದಡ್ಕ, ಉದ್ಯಮಿ ಡಿ.ಡಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌‌ ಕರೀಂ ಗೇರುಕಟ್ಟೆ ಅವರು ಮುತುವರ್ಜಿ ವಹಿಸಿ ಈ ಸಾಂತ್ವಾನ‌ನಿಧಿ ಮಂಜೂರುಗೊಳ್ಳುವಲ್ಲಿ ಶ್ರಮಿಸಿದರು.

ಮೃತ ಹಂಝ ಅವರಿಗೆ ಸ್ವಂತ ಜಾಗ ಮತ್ತು ಮನೆ ಇಲ್ಲದ್ದರಿಂದ ಈಗಲೂ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಅವರ ಏಕೈಕ ಪುತ್ರ ಧರ್ಮಗುರುವಾಗಿದ್ದು ಅಲ್ಪ ವೇತನಕ್ಕೆ ದುಡಿಯುತ್ತಿದ್ದಾರೆ. ಮೂವರು ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡಲಾಗಿದ್ದು ಒಬ್ಬಾಕೆ ಮನೆಯಲ್ಲೇ ಇದ್ದಾರೆ. ಈ ಎಲ್ಲ ಕಷ್ಟವನ್ನು ನಿಭಾಯಿಸಲೋಸುಗ ಹಂಝ ಅವರು ಇಳಿವಯಸ್ಸಿನಲ್ಲೂ ಕೂಲಿ ನಾಲಿ ಮಾಡಿ ಕುಟುಂಬ ಸಾಕುತ್ತಿದ್ದರು. ಅವರೇ ಇದೀಗ ದುರ್ಘಟನೆಗೊಳಗಾಗಿ ಪ್ರಾಣ ಕಳೆದುಕೊಂಡಿದ್ದು ಕುಟುಂಬ ಸಂಕಷ್ಟಕ್ಕೆ ಗುರಿಯಾಗಿದೆ. ಈ ವಿಚಾರವನ್ನು ಗುತ್ತಿಗೆದಾರರಿಗೆ ಮನವರಿಕೆ ಮಾಡಲಾಯಿತು. ಈ ವೇಳೆ ತಕ್ಷಣ ಸ್ಪಂದಿಸಿದ ಅವರು ಸಾಂತ್ವಾನನಿಧಿ ಹಸ್ತಾಂತರಿಸಿದರು. ಮುಂದೆಯೂ ಅಗತ್ಯ ಸಂದರ್ಭದಲ್ಲಿ ಸಹಕರಿಸುವ ಭರವಸೆ ನೀಡಿದ್ದಾರೆ. ಕಂಪೆನಿಯ ಯೋಜನಾ ವ್ಯವಸ್ಥಾಪಕ ದಾಮೋಧರ, ಸಾರ್ವಜನಿಕ ಸಂಪರ್ಕಾಧಿಕಾರಿ ಉದಯ, ಸ್ಥಳ ಮೇಲುಸ್ತುವಾರಿ ಜಗದೀಶ್ ಅವರು ಮೃತರ ಪುತ್ರ ಅಬ್ದುಲ್ಲ ಸ‌ಅದಿ ಅವರಿಗೆ ನ.21ರಂದು ಅವರ ನಿವಾಸದಲ್ಲಿ ಸಾಂತ್ವಾನ‌ ನಿಧಿ ವರ್ಗಾಯಿಸಿದರು. ಈ ವೇಳೆ ಬೆದ್ರಬೆಟ್ಟು ಮಸ್ಜಿದ್ ಅಧ್ಯಕ್ಷ ಸಲೀಂ, ಎಸ್‌.ವೈ.ಎಸ್ ಪ್ರಮುಖ ಸಂಘಟಕ ಮಜೀದ್ ಬೆದ್ರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Exit mobile version