ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರಕ್ಕೆ ಬೆಂಗಳೂರು, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣಿಕರಣ ಸಂಸ್ಥೆ ಕರ್ನಾಟಕ ಸರ್ಕಾರದ ಅಧ್ಯಕ್ಷೆ ಲಾವಣ್ಯ ಬಳ್ಳಾಲ್ ಅವರು ನ.21ರಂದು ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.ಆಡಳಿತ ಮಂಡಳಿಯಿಂದ ಶಿಶಿಲದ ವಂಶಸ್ಥರಾದ ಲಾವಣ್ಯ ಬಳ್ಳಾಲ್ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಡಾ. ಕೆ. ಜಯಕೀರ್ತಿ ಜೈನ್..ಪದ್ಮಾಂಜಲಿ ಧರ್ಮಸ್ಥಳ, ಶ್ರೀ ಮಹೇಂದ್ರವರ್ಮ ಉಪ್ಪಿನಂಗಡಿ, ಭುಜಬಲಿ ಧರ್ಮಸ್ಥಳ, ವಿಜಯಕುಮಾರ್ ಸಿದ್ದಾರ್ಥ ನಿಲಯ, ಜಿನರಾಜ ಪೂವಣಿ, ಉಜಿರೆ ಫಣಿರಾಜ್ ಜೈನ್, ಕೊಕ್ಕಡ ರಾಜೇಂದ್ರ ಕುಮಾರ್ ಮೂಡಾರ್, ಧನಕೀರ್ತಿ ಶೆಟ್ಟಿ ಧರ್ಮಸ್ಥಳ, ಮಹಾವೀರ್ ದೆಪ್ಪುನಿ, ಶುಭಕರ್ ಹೆಗ್ಡೆ ಇಜಿಂಲ್ಲಾಪ್ಪಾಡಿ ಬೀಡು, ಚಂಪಾ ಬೆಳ್ತಂಗಡಿ, ವಿಜಯಕುಮಾರ್ ಬಪ್ಪಕೋಡಿ, ಮಹಾವೀರ ಜೈನ್ ಇಜೀಲಾಂಪಾಡಿ, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಸಂತೋಷ್ ಕುಮಾರ್, ರತ್ನವರ್ಮ ಜೈನ್ ಕನ್ಯಾಡಿ, ಮನೋಹರ್ ಜೈನ್ ಶಿವಮೊಗ್ಗ, ಶ್ರೀಧರ್ ಹೆಗ್ಡೆ ಪುತ್ತೂರು, ಮಲ್ಲಿನಾಥ ಜೈನ್ ಧರ್ಮಸ್ಥಳ, ರಾಣಿ ಶ್ರೀ ಕಾಳಾಲಾ ದೇವಿ ಜೈನ ಮಹಿಳಾ ಸಮಾಜದ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಪದಾಧಿಕಾರಿಗಳು ಉಪಸ್ಥಿತರಿದ್ದು, ಸ್ಥಳ ಪುರೋಹಿತರಾದ ಅರಹಂತ ಇಂದ್ರ ಹಾಗೂ ಪ್ರದೀಪ್ ಪುರೋಹಿತರು ಇಜಿಲಾಂಪಾಡಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಕೊಕ್ಕಡದ ಫಣಿರಾಜ್ ಜೈನ್ ಅವರು ಭೋಜನದ ವ್ಯವಸ್ಥೆ ಮಾಡಿದರು. ಡಾ. ಕೆ. ಜಯಕೀರ್ತಿ ಜೈನ್ ಸ್ವಾಗತಿಸಿ, ಯುವರಾಜ ಪೂವಣಿ ನೆಕ್ಕರಾಜೆ ಅವರು ವಂದಿಸಿದರು.

