Site icon Suddi Belthangady

ಕನ್ಯಾಡಿ: ಸ. ಉ. ಹಿ. ಪ್ರಾ. ಶಾಲಾ ಯು.ಕೆ.ಜಿ ತರಗತಿ ಕಟ್ಟಡಕ್ಕೆ ಶಿಲಾನ್ಯಾಸ

ಧರ್ಮಸ್ಥಳ: ಕನ್ಯಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ದಾನಿಗಳಾದ ರಾಧಾಕೃಷ್ಣ ಗುಲ್ಲೋಡಿ ಅವರ ಸಹಕಾರದಿಂದ ನ. 21ರಂದು ಯುಕೆಜಿ ಕೊಠಡಿಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ. ಶ್ರೀನಿವಾಸ ರಾವ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ನಂದ ಅವರ ಉಪಸ್ಥಿತಿಯಲ್ಲಿ ನೆರವೇರಿತು.

ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಸುವರ್ಣ, ಭಾರತಿ, ಗೌರವ ಸಲಹೆಗಾರ ಸುಂದರ ಗೌಡ ಪುಡ್ಕೆತು, ನವೀನ್ ಚಂದ್ರ ಶೆಟ್ಟಿ, ರಾಜೇಂದ್ರ ಅಜ್ರಿ, ಸೂರ್ಯ ಪ್ರಕಾಶ್ ಎಂ, ನೀಲಕಂಠ ಶೆಟ್ಟಿ , ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಚಂದ್ರಾವತಿ ಮತ್ತು ಸದಸ್ಯರು,ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾ . ಎನ್ ಮತ್ತು ಶಿಕ್ಷಕ ವೃಂದ ದವರು ಉಪಸ್ಥಿತರಿದ್ದರು.

Exit mobile version