
ಇಂದಬೆಟ್ಟು: ಶ್ರೀ ಅರ್ಧನಾರೀಶ್ವರ ದೇವಸ್ಥಾನ, ದೇವನಾರಿ ಇಂದಬೆಟ್ಟು ಉಳ್ಳಾಕುಳ ಮೂಲಸ್ಥಾನ ಶ್ರೀ ಕ್ಷೇತ್ರ ಕುರುವಲ್ಲ ಕಳ್ಳಗುಂಡದಲ್ಲಿ ಉಳ್ಳಾಯ- ಉಳ್ಳಾಲ್ತಿ ಭೈರವ -ಮೂರ್ತಿಲ್ಲಾಯಾ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ನೂತನ ಭವ್ಯ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನ.26ರಂದು ನಡೆಯಲಿದೆ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಶರತ್ ಕೃಷ್ಣ ಪಡೆವೆಟ್ನಾಯರ ಉಪಸ್ಥಿತಿಯಲ್ಲಿ, ಡಾ. ಪ್ರದೀಪ್ ಎ. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕರವಲ್ಲ ಕಲ್ಲಗುಂಡ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಚೈನ್ ಇಂದಬೆಟ್ಟು ಗುತ್ತು ಅವರು ವಹಿಸಿಕೊಳ್ಳಲಿದ್ದಾರೆ. ದಿಕ್ಕೂಚಿ ಭಾಷಣವನ್ನು ಕಾರ್ಕಳ ಧಾರ್ಮಿಕ ಚಿಂತಕರು ಆಗಿರುವ ಶ್ರೀಕಾಂತ್ ಶೆಟ್ಟಿ ಮಾಡಲಿದ್ದಾರೆ

