Site icon Suddi Belthangady

ಬೆಳ್ತಂಗಡಿ: ಹೋಲಿ ರಿಡೀಮರ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ

ಬೆಳ್ತಂಗಡಿ: ಹೋಲಿ ರಿಡೀಮರ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವು ನ. 20ರಂದು ಹೋಲಿ ರಿಡೀಮರ್ ಚರ್ಚ್ ಮೈದಾನದಲ್ಲಿ ಜರಗಿತು. ಶಾಲಾ ಸಂಚಾಲಕ ಫಾ. ವಾಲ್ಟರ್ ಓಸ್ವಾಲ್ಡ್ ಡಿ’ಮೆಲ್ಲೊ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿತಿಗಳಾಗಿ ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಡಾ. ಲಾರೆನ್ಸ್ ಮುಕ್ಕುಯಿ ಭಾಗವಹಿಸಿ ಶುಭ ಹಾರೈಸಿದರು.

ಗೌರವ ಅತಿಥಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಆಯೋಗಗಳ ಸಂಚಾಲಕಿ ಪೌಲಿನ್ ರೇಗೋ, ಚರ್ಚ್ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ರೆನ್ನಿ ವಾಸ್, ಪಿ.ಟಿ.ಎ. ಉಪಾಧ್ಯಕ್ಷ ರಿಚರ್ಡ್ ಸಿಕ್ವೇರಾ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಫಾ. ಕ್ಲಿಫರ್ಡ್ ಪಿಂಟೊ ಸ್ವಾಗತಿಸಿದರು. ಶಿಕ್ಷಕಿ ಬ್ಲೆoಡಿನ್ ರೊಡ್ರಿಗಸ್ ವರದಿ ವಾಚಿಸಿದರು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳ ವರದಿ ಪ್ರೀತ ಡಿಸೋಜ ವಾಚಿಸಿದರು. ಸನ್ಮಾನಿತರ ಪರಿಚಯ ಪಲ್ಲವಿ, ಮುಖ್ಯ ಅತಿಥಿಗಳ ಪರಿಚಯ ರಿನೀಟಾ ಲಸ್ರಾದೋ ನೆರವೇರಿಸಿದರು.

ಮಕ್ಕಳು, ಪೋಷಕರು, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರನ್ನು, ಎಸ್. ಎಸ್. ಎಲ್. ಸಿ. ಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಎಲ್ಲ ತರಗತಿ ವಿದ್ಯಾರ್ಥಿಗಳಿಗೆ ಕ್ಲಾಸ್ ಟೋಪಾರ್ಸ್ ಗೌರವಿಸಲಾಯಿತು.

ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸರಿತಾ ರೊಡ್ರಿಗಸ್ ಮತ್ತು ಎಲ್ವಿಟ ಪಾಯ್ಸ್ ಕಾರ್ಯಕ್ರಮ ನಿರೂಪಿಸಿದರು. ಲೋನಾ ಲೋಬೊ ವಂದಿಸಿದರು.

Exit mobile version