ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪುನರ್ ರಚನೆಗೊಂಡಿದ್ದು ಅಧ್ಯಕ್ಷರಾಗಿ ಬಿ. ಹರೀಶ್ ಕುಮಾರ್ ಬೆರ್ಕೆತ್ತೋಡಿ ಮರು ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.
ಸದಸ್ಯರಾಗಿ ಪ್ರಧಾನ ಅರ್ಚಕ ವೇ. ಮೂ. ರಾಘವೇಂದ್ರ ಆಸ್ರಣ್ಣ, ಹೇಮಂತ್ ಕುಮಾರ್, ಶರತ್ ಕುಮಾರ್ ಶೆಟ್ಟಿ, ಹರೀಶ್ ಗೌಡ ಬಿ., ನೀನಾ ಕುಮಾರ್, ಅರುಣ್ ಶೆಟ್ಟಿ ಮೋಹಿನಿ, ರೀತಾ ಪಿ. ಆಯ್ಕೆಯಾಗಿದ್ದಾರೆ
ಮುಂದಿನ ಜನವರಿ ತಿಂಗಳಲ್ಲಿ ಜಾತ್ರಾ ಮಹೋತ್ಸವ ಮತ್ತು 2028ರಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಕ್ಷೇತ್ರಕ್ಕೆ ಅಪಾರ ಭಕ್ತರನ್ನು ಹೊಂದಿದ್ದು ಅಭಿವೃದ್ಧಿ ಸಮಿತಿ, ಮಾತೃ ಮಂಡಳಿ, ಭಜನಾ ಮಂಡಳಿ, ವಿವಿಧ ಸಂಘ ಸಂಸ್ಥೆ, ದಾನಿಗಳ ಊರ ಪರ ಊರ ಭಕ್ತರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಯಾಗಿದೆ ಮುಂದಕ್ಕೂ ಕ್ಷೇತ್ರದ ನಿತ್ಯ ಪೂಜಾ, ಸೇವಾ ಕಾರ್ಯ ಗಳಿಗೆ ಸಹಕರಿಸಬೇಕು ಎಂದು ಅಧ್ಯಕ್ಷ ಬಿ. ಹರೀಶ್ ಕುಮಾರ್ ವಿನಂತಿಸಿದ್ದಾರೆ.
ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪುನರ್ ರಚನೆ-ಅಧ್ಯಕ್ಷರಾಗಿ ಬಿ. ಹರೀಶ್ ಕುಮಾರ್

