ಬೆಳ್ತಂಗಡಿ: ರೋಟರಿ ಕ್ಲಬ್ ರೋಟರಿ ಸೇವಾ ಟ್ರಸ್ಟ್, ಬೆಂಗಳೂರು ರೋಟರಿ ಇವರ ಸಹಯೋಗದಲ್ಲಿ ಬಯಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ನಿರ್ಮಿಸಲ್ಪಟ್ಟ ಬಾಲಕಿಯರ ಶೌಚಾಲಯವನ್ನು ರೋಟರಿ ಕ್ಲಬ್ ನ DGM ಪ್ರಶಾಂತ್ ಜೋಶಿ ಉದ್ಘಾಟಿಸಿದರು.
ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಪ್ರಭು, ಕಾರ್ಯದರ್ಶಿ ಎಂ.ಎಂ. ದಯಾಕರ, ನಿಕಟ ಪೂರ್ವ ಅಧ್ಯಕ್ಷ ಪೂರನ್ ವರ್ಮ, ನಿಕಟ ಪೂರ್ವ ಕಾರ್ಯದರ್ಶಿ ಸಂದೇಶ್ ರಾವ್, ಮಾಜಿ ಅಧ್ಯಕ್ಷರಾದ ಎಂ. ಬಿ. ಭಟ್, ಅನಂತ ಭಟ್ ಮಚ್ಚಿಮಲೆ, ನಿಯೋಜಿತ ಅಧ್ಯಕ್ಷ ಶ್ರೀಧರ್, ನಿಯೋಜಿತ ಕಾರ್ಯದರ್ಶಿ ವಿಧ್ಯಾಕುಮಾರ್, ಇಂಜಿನಿಯರ್ ಶ್ರವಣ್ ಕುಮಾರ್, ಅಬುಬ್ಬಕ್ಕರ್, ನೆರಿಯ ರೋಟರಿ ಸಮುದಾಯ ದಳದ ಅಧ್ಯಕ್ಷ ಪಿ.ಕೆ. ರಾಜನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಮುಚ್ರಾಳಿ, ಆನಂದ ಪೂಜಾರಿ, ಸಜಿ, ಶೃತಿ, ಅಸಕುಂಞಿ, ಸಹನಾ, ತ್ರೇಸಿಯಾ, ಶಿಕ್ಷಕವೃಂದ, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಮಂಜುನಾಥ ಅವರು ಸ್ವಾಗತಿಸಿ, ಧನ್ಯವಾದವಿತ್ತರು.

