ಉಜಿರೆ: ಅಬ್ದುಲ್ ನಜೀರ್ ಸಾಬ್ ಪಂಚಾಯತ್ ರಾಜ್ ಪೀಠ, ಸಿ.ಎಂ.ಡಿ.ಆರ್ ಸಂಸ್ಥೆ ಧಾರವಾಡ ವತಿಯಿಂದ ಹಮ್ಮಿಕೊಂಡಿರುವ ‘ವಿಕಸಿತ ಭಾರತ @ 2047 ಸಾಧಿಸಲು ಗ್ರಾಮ ಪಂಚಾಯತ್ ಗಳ ಪಾತ್ರ” ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಯವರಿಗೆ ಆಹ್ವಾನ ಬಂದಿರುತ್ತದೆ.
ಸೆಂಟರ್ ಫಾರ್ ಮಲ್ಟಿ-ಡಿಸ್ಸಿಪ್ಲಿನರಿ ಡೆವಲಪ್ಟಂಟ್ ರಿಸರ್ಚ್ ಸಂಸ್ಥೆ (CMDR) ಧಾರವಾಡ, ರಾಷ್ಟ್ರ ಮಟ್ಟದ ಸಂಶೋಧನಾ ಸಂಸ್ಥೆಯಾದ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಕೇಂದ್ರ (ICSSR) ನವದೆಹಲಿ ಇದರ ಒಂದು ಅಂಗ ಸಂಸ್ಥೆಯಾಗಿದ್ದು, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಗ್ರಾಮೀಣಾಭಿರುದ್ದಿ ಮತ್ತು ಪಂಚಾಯತ್ ರಾಜ್, ಕೃಷಿ, ಅರೋಗ್ಯ, ಶಿಕ್ಕಣ ಮತ್ತು ಇನ್ನಿತರ ವಿಷಯಗಳ ಕುರಿತು ಅನೇಕ ಸಂಶೋಧನಾ ಅಧ್ಯಯನ, ವಿಚಾರ ಸಂಕಿರಣ, ಮತ್ತು ತರಬೇತಿ ಕಾರ್ಯಕ್ರಮವನ್ನು ಕೈಗೊಂಡಿರುತ್ತದೆ. ನ. 20,21 ರಂದು 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಈ ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ರಾಜ್ಯಗಳ ಪಂಚಾಯತ್ ರಾಜ್ ತಜ್ಞರು, ಅಧಿಕಾರಿಗಳು, ಎನ್‌ಜಿಓ ಪ್ರತಿನಿಧಿಗಳು ಮತ್ತು ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ,ಗ್ರಾಮ ಪಂಚಾಯತಿಯಲ್ಲಿ ಕೈಗೊಂಡಿರುವ ವಿನೂತನ ಮತ್ತು ಮಾದರಿ ಕಾರ್ಯಕ್ರಮಗಳನ್ನು ಈ ವಿಚಾರ ಸಂಕಿರಣ ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಹಂಚಿಕೊಳ್ಳಲಿದ್ದಾರೆ.

