ಉಜಿರೆ: ಬೆಳಾಲು ರಸ್ತೆಯ ನಿನ್ನಿಕಲ್ ನಲ್ಲಿ ಸಿಮೆಂಟ್ ಇಟ್ಟಿಗೆ ತಯಾರಿಕಾ ಘಟಕ ಶ್ರೀ ಮದುಮುಕ ಎಂಟರ್ ಪ್ರೈಸಸ್ ನ. 23 ರಂದು ಉದ್ಘಾಟನೆಗೊಳ್ಳಲಿದೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ ನೂತನ ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಜಿರೆ ಕೆನರಾ ಬ್ಯಾಂಕ್ ವರಿಷ್ಟ ಪ್ರಬಂಧಕ ಜಯಂತ ಅಡಿಗ, ಬೆಳ್ತಂಗಡಿ ಬಂಟರ ಸಂಘದ ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ, ಸಾಧನಾ, ಮಾಜಿ ಅಧ್ಯಕ್ಷರು, ಬಂಟರ ಸಂಘ, ಹಾಸನ ಜಿಲ್ಲಾ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರು ವಿನಯ ರಾಣಿ ಭಾಗವಹಿಸಲಿದ್ದಾರೆ. ಸಿಮೆಂಟ್ ಇಟ್ಟಿಗೆ, ಕಿಟಕಿ, ದಾರಂದ ಅತ್ಯುತ್ತಮ ಕ್ವಾಲಿಟಿಯಲ್ಲಿ ತಯಾರಿಸಿ ಹಾಗೂ ಕಿಟಕಿಗಳಿಗೆ ಸ್ಟೀಲ್ ರಾಡ್ ಕೂಡ ಹಾಕಿ ಕೊಡಲಾಗುವುದು ಎಂದು ಮಾಲಕ ಬಾಬು ಮೊಗೇರ ಎರ್ನೋಡಿ ತಿಳಿಸಿದ್ದಾರೆ.
ನ. 23: ಉಜಿರೆ ನಿನ್ನಿಕಲ್ ನಲ್ಲಿ ಶ್ರೀ ಮದುಮುಕ ಎಂಟರ್ ರ್ಪ್ರೈಸಸ್ ಸಿಮೆಂಟ್ ಇಟ್ಟಿಗೆ ತಯಾರಿಕಾ ಘಟಕದ ಉದ್ಘಾಟನೆ

