Site icon Suddi Belthangady

ಕಲ್ಮಂಜ: ಸ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ, ಪೋಷಕ-ಶಿಕ್ಷಕರ ಮಹಾಸಭೆ

ಕಲ್ಮಂಜ: ಸ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ, ಪೋಷಕ-ಶಿಕ್ಷಕರ ಮಹಾಸಭೆ ನ.14ರಂದು ನಡೆಯಿತು. ಶಾಲಾ ಅಧ್ಯಕ್ಷ ಚಿದಾನಂದ, ಉಪಾಧ್ಯಕ್ಷೆ ಪ್ರತೀಕ್ಷಾ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಹಮೀದ್, ಶತಮಾನೋತ್ಸವ ಸಮಿತಿಯ ಮತ್ತು ಹಳೆವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಾಯ, ಶತಮಾನೋತ್ಸವ ಸಂಘದ ಅಧ್ಯಕ್ಷ ಪ್ರವೀಣ್ ಫರ್ನಾಂಡೀಸ್ ಹಳ್ಳಿಮನೆ, ಮಾರ್ಗದರ್ಶಕರಾಗಿ ಆಗಮಿಸಿದ್ದ BRP ಮೋಹನ್, ಶಾಲಾ ನಾಯಕನಾದ ಏಳನೆ ತರಗತಿಯ ಭವಿತ್, ಶಾಲಾ ಮುಖ್ಯಶಿಕ್ಷಕಿ ಮಂಜುಳ, SDMC ಸದಸ್ಯರು, ಪೋಷಕರು, ಗ್ರಾಮ ಪಂಚಾಯಿತಿಯ ಸದಸ್ಯರು, SDM ಕಾಲೇಜಿನ ಡಿ.ಎಡ್. ವಿದ್ಯಾರ್ಥಿಗಳು, ಮಕ್ಕಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿಯವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಯವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ನೆಹರು. ಮಕ್ಕಳ ಹಕ್ಕುಗಳು, ಇಂದಿನ ಸಮಯದಲ್ಲಿ ಶಿಕ್ಷಣದಲ್ಲಿ ಆದ ಬದಲಾವಣೆ ಬಗ್ಗೆ ಮಾಹಿತಿ ನೀಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಂಡಿತ್ ಜವಾಹರಲಾಲ್ ನೆಹರುರವರು ಮಾಡಿದ ಅಸಾಧಾರಣ ತ್ಯಾಗಗಳನ್ನು ವಿದ್ಯಾರ್ಥಿಗಳಿಗೆ ನೆನಪಿಸಿದರು. ಅವರ ಪ್ರಯತ್ನಗಳಲ್ಲಿ ಅವರನ್ನು ಆದರ್ಶವಾಗಿ ಇರಿಸಿಕೊಳ್ಳಬೇಕೆಂಬುದನ್ನು ಹಲವು ಉದಾಹರಣೆ ಹೇಳಿದರು.

ಶತಮಾನೋತ್ಸವ ಅಧ್ಯಕ್ಷ ಪಂಡಿತ್ ಜವಾಹರ್ ಲಾಲ್ ನೆಹರುರವರ ಬಗ್ಗೆ ಮಾಹಿತಿ ಯುಕ್ತ ಮತ್ತು ಸ್ವೂರ್ತಿದಾಯಕ ಭಾಷಣ ಮಾಡಿದರು. ಹಾಗೂ ಇಂದಿನ ದಿನದಲ್ಲಿ ಪೋಷಕರು ತಮ್ಮನ್ನು ತಾವು ಶಾಲಾ ಕೆಲಸ ಕಾರ್ಯಗಳಲ್ಲಿ ಹೇಗೆ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಪ್ರತಿದಿನ ಬಿಡುವಿದ್ದ ಸಮಯದಲ್ಲಿ ಪೋಷಕರು ಶಾಲೆಗೆ ಆಗಮಿಸಿ ತಾವು ಮಾಡುವಂತಹ ಕೆಲಸದಲ್ಲಿ ಭಾಗಿಯಾಗಿ ಶಾಲೆಯ ಚಿತ್ರಣವನ್ನೆ ಬದಲಾಯಿಸಲು ಕೈ ಜೋಡಿಸಬೇಕೆಂದು ವಿನಂತಿ ಮಾಡಿದರು. ಅಥಿತಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಮಕ್ಕಳು ನೆಹರುರವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಹಾಗೂ ಶಾಲಾ ಶಿಕ್ಷಕ ವೃಂದದವರ ಜೊತೆ ಸೇರಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿದರು. ಉಜಿರೆ ಆದರ್ಶ ನಗರ ಮಸಾಲ ಮಂದಿ ಮಾಲಕ ನಜೀರ್ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿದವರು. ಶಿಕ್ಷಕ ವೃಂದದವರು ಮತ್ತು ಅಡುಗೆ ಸಿಬ್ಬಂದಿಯವರು ಸಹಕರಿಸಿದರು.

ಸಹಶಿಕ್ಷಕಿಯರಾದ ಶೀಲಾವತಿ ಸ್ವಾಗತಿಸಿದರು. ಐಶ್ಚರ್ಯ, ಶಿಲ್ಪ ಕಾರ್ಯಕ್ರಮ ನಿರೂಪಿಸಿದರು.

Exit mobile version