Site icon Suddi Belthangady

ನಾರಾವಿ ವಲಯ ಮಟ್ಟದ ಪ್ರತಿಭಾ ಕಾರಂಜಿ-ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ವೇಣೂರು: ನಾರಾವಿ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದ ವಿದ್ಯಾರ್ಥಿಗಳು ಸಮಗ್ರ ಬಹುಮಾನ ಗಳಿಸಿದ್ದಾರೆ.
1.ಅನಘ ಜೈನ್ ಗಝಲ್ ಪ್ರಥಮ
2.ಧನುಶ್ರೀ ಕಾವ್ಯವಾಚನ ಪ್ರಥಮ
3.ಶಭರಿ ಆಶುಭಾಷಣ ಪ್ರಥಮ
4.ನಯಾಜ್ ಹಿಂದಿ ಭಾಷಣ ಪ್ರಥಮ
5.ಮಯೂರ್ ಮಿಮಿಕ್ರಿ ಪ್ರಥಮ
6.ಧವಳ್ ಚರ್ಚಾ ಸ್ಪರ್ಧೆ ಪ್ರಥಮ
7.ಅಮೋಘ ತುಳು ಭಾಷಣ ಪ್ರಥಮ
8.ನರಸಿಂಹ ಕಾಮತ್ ಮತ್ತು ಪ್ರಾಪ್ತಿ ರಸಪ್ರಶ್ನೆ ಪ್ರಥಮ 9.ಶರತ್ ಚಿತ್ರಕಲೆ ಪ್ರಥಮ. 10.ತೇಜಸ್ವಿ ರಂಗೋಲಿ ಪ್ರಥಮ
11.ಧನುಶ್ರೀ ಕನ್ನಡ ಭಾಷಣ ದ್ವಿತೀಯ
12..ಶ್ರೀನಿಕ ಇಂಗ್ಲೀಷ್ ಭಾಷಣ ದ್ವಿತೀಯ
13..ಶಬರಿ ಜನಪದ ಗೀತೆ ತೃತೀಯ
14.ಮೇಘ ಶ್ಯಾಮ ಭಗವದ್ಗೀತೆ ಧಾರ್ಮಿಕ ಪಠಣ ತೃತೀಯ
15.ಲಹರಿ ಪ್ರಬಂಧ ತೃತೀಯ.

ಸುಲ್ಕೇರಿ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ನಾರಾವಿ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು 10 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ 2, ದ್ವಿತೀಯ ಸ್ಥಾನ ಹಾಗೂ 3 ತೃತೀಯ ಸ್ಥಾನವನ್ನು ಪಡೆದು ಸಮಗ್ರ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 12 ಸ್ಪರ್ಧೆಗಳಲ್ಲಿ ತಾಲೂಕು ಮಟ್ಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿ, ತಾಲೂಕು ಮಟ್ಟದ ಸ್ಪರ್ಧೆಗೆ ಉಪ ಪ್ರಾಂಶುಪಾಲರು, ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ SDMC ಕಾರ್ಯಾಧ್ಯಕ್ಷರು ಶುಭ ಕೋರಿದರು .

    Exit mobile version