ಉಜಿರೆ: ಮುಂಡತ್ತೊಡಿ ಗೆಳೆಯರ ಬಳಗದ ಆಶ್ರಯದಲ್ಲಿ ನವೆಂಬರ್ 16ರಂದು ಕೆಸರ್ ದ ಗೊಬ್ಬು ಕ್ರೀಡಾಕೂಟ ಆಯೋಜಿಸಲಾಯಿತು. ಉದ್ಘಾಟನೆಯನ್ನು ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅವರು ನೆರವೇರಿಸಿದರು. ಉಜಿರೆ ಸಿವಿಲ್ ಇಂಜಿನಿಯರ್ ವಿದ್ಯಾ ಕುಮಾರ್ ಕ್ರೀಡಾಂಗಣ ಉದ್ಘಾಟನೆಯನ್ನು ನೆರವೇರಿಸಿದರು. ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಗಣೇಶ್ ಡಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಷಾ ಕಿರಣ್ ಕಾರಂತ್, ಸದಾಶಿವ ಹೆಗ್ಡೆ, ವಿಜಯ್ ಗೌಡ, ಲಕ್ಷ್ಮಣ ಸಪಲ್ಯ, ಗುರುಪ್ರಸಾದ್ ಕೋಟ್ಯಾನ್ ಉಪಸ್ಥಿತರಿದ್ದರು.
ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವೆಂಕಪ್ಪ (ರವಿ) ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿರಣ್ ಚಂದ್ರ ಪುಷ್ಪಗಿರಿ, ರಕ್ಷಿತ್ ಶಿವರಾಮ್, ರಮೇಶ್ ಗೌಡ ಕೆದ್ದ, ಚೇತನ್ ಗೌಡ, ದಿನೇಶ್ ಪೂಜಾರಿ, ವೇದಪ್ರಕಾಶ್ ಸುಧಾಕರ ಎಚ್. ಕೆ., ಸುಮಾ, ಚಂದ್ರಕಲಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು. ಗುಣಪಾಲ ಎಂ.ಎಸ್., ಲೋಕೇಶ್ ನಿನ್ನಿಕಲ್ಲು, ಪ್ರೀತಿ ಮುಂಡತ್ತೋಡಿ ಅವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
ಮಕ್ಕಳಿಗೆ ಪುರುಷರಿಗೆ ಮಹಿಳೆಯರಿಗೆ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು ಬಹುಮಾನ ವಿತರಣೆ ಹಾಗೂ ಯಕ್ಷಗಾನ ಹಾಸ್ಯ ವೈಭವ ನಡೆಸಲಾಯಿತು. ವೆಂಕಪ್ಪ ಸ್ವಾಗತಿಸಿದರು. ಸುಬ್ರಾಯ ಕಲ್ಮಂಜ, ಸಮೀಕ್ಷ ಪೂಜಾರಿ ಶಿರ್ಲಾಲು, ಅಭಿಜ್ಞಾ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನೆ ಎಲ್ಲಾ ಸದಸ್ಯರು ಹಾಜರಿದ್ದರು. ಸುಬ್ರಾಯ ಕಲ್ಮಂಜ ಧನ್ಯವಾದ ಸಲ್ಲಿಸಿದರು.

