ಬೆಳ್ತಂಗಡಿ: ಗ್ರಾಮೀಣ ಭಾಗದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜು ಆರಂಭಿಸಿ ಅದರ ಪ್ರಯೋಜನ ಲಭಿಸುವಂತೆ ಮಾಡಿದ್ದೂ ಮಾತ್ರವಲ್ಲದೆ ಇವತ್ತು ರಾಜ್ಯ ಮಟ್ಟದ ರ್ಯಾಂಕ್ ವರೆಗೆ ಸಾಧನೆ ದಾಖಲಿಸಿರುವುದು ಅಭಿನಂದನಾರ್ಹ ಎಂದು ವಿಧಾನ ಸಭೆಯ ಸಭಾಪತಿ ಯು.ಟಿ ಖಾದರ್ ಹೇಳಿದರು.
ನ. 15 ರಂದು ಗೇರುಕಟ್ಟೆಯ ಮನ್‌ಶರ್ ವಿದ್ಯಾಸಂಸ್ಥೆಯಲ್ಲಿ ನಡೆದ 5 ನೇ ಬ್ಯಾಚ್ ನ ಪದವಿ ಪ್ರದಾನ ಸಮಾರಂಭ ಹಾಗೂ ಕಳೆದ ಸಾಲಿನಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಪದವಿ ನಂತರ ಉದ್ಯೋಗ ಪಡೆಯುವುದು, ಪಡೆದ ಉದ್ಯೋಗವನ್ನು ಪ್ರಮಾಣಿಕತೆಯಿಂದ ನಿರ್ವಹಿಸಿ, ಹೆತ್ತವರಿಗೆ ಕಲಿತ ವಿದ್ಯಾಸಂಸ್ಥೆಗೆ ಒಳ್ಳೆಯ ಹೆರಸನ್ನು ತರಬೇಕು ಎಂದರು.
ಈ ಸಂದರ್ಭದಲ್ಲಿ ಪ್ಯಾರಾಮೆಡಿಕಲ್ DMIT/DMLT ವಿಭಾಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ, ದ್ವಿತೀಯ, ತ್ರಿತಿಯ ಹಾಗೂ ಇತರ ರಾಂಕ್ ಪಡೆದ ವಿದ್ಯಾರ್ಥಿಗಳು, ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ, ವಿದ್ಯಾರ್ಥಿ ಜೀವನಕ್ಕೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನ್‌ಶರ್ ಸಂಸ್ಥೆಯ ಶಿಲ್ಪಿ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಸಂಸ್ಥೆ ಭವಿಷ್ಯದ ಧ್ಯೇಯೋದ್ದೇಶ ಹೇಳಿದರು.
ಉದ್ಘಾಟನೆಯನ್ನು ಸಯ್ಯಿದ್ ಅಬ್ದುಲ್ ರಹಿಮಾನ್ ಸಾದಾತ್ ತಂಙಳ್ ಬಾ ಅಲವಿ ನಿರ್ವಹಿಸಿದರು. ಯು.ಟಿ ಖಾದರ್ ಅವರು ಮನ್‌ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪ್ಯಾರ ಮೆಡಿಕಲ್ ಹಾಗು ಪಿ. ಯು. ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಮುಖ್ಯ ಅತಿಥಿಗಳಾಗಿ ಜನಪ್ರಿಯ ಆಸ್ಪತ್ರೆ ಹಾಗೂ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಅಬ್ದುಲ್ ಬಶೀರ್, ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಮುಖ್ಯಸ್ಥ ಡಾ. ಮುರಳಿಕೃಷ್ಣ ಇರ್ವತ್ರಾಯ, ಮಂಗಳೂರು ಭಾರತ್ ಇನ್ಫೋ-ಟೆಕ್ ಕಂಪೆನಿಯ ಚೇರ್ಮನ್ ಎಸ್. ಎಂ. ಮುಸ್ತಾಫಾ, ಮೀಫ್ ಉಪಾಧ್ಯಕ್ಷ ಸೂಡ, ಅಧ್ಯಕ್ಷರಾದ ಕೆ. ಎಮ್. ಮುಸ್ತಾಫಾ, ಸಯ್ಯಿದ್ ಸಲಾಂ ತಂಙಳ್ ಪುಂಜಾಲಕಟ್ಟೆ ಅವರು ಭಾಗವಹಿಸಿದ್ದರು.
ಪುತ್ತೂರಿನ ಖ್ಯಾತ ವಕೀಲ ನೂರುದ್ದಿನ್ ಸಾಲ್ಮರ, ಕಳಿಯ ಪಂಚಾಯತ್ ಅಧ್ಯಕ್ಷ ದಿವಾಕರ, ಪಂಚಾಯತ್ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಕಳಿಯ ಪಂಚಾಯತ್ ಪ್ರಭಾರ ಪಿಡಿಒ ಕುಂಞ, ಸಂಘಟಕ ಸಲೀಂ ಕನ್ಯಾಡಿ, ಉಪ್ಪಿನಂಗಡಿ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಖಲೀಲ್, ಜನಪ್ರಿಯ ಆಸ್ಪತ್ರೆಯ ಆಡಳಿತಾಧಿಕಾರಿ ಮನ್ಸೂರ್, ಪ್ಯಾರಾಮೆಡಿಕಲ್ ಅಲುಮಿನಿ ವಿದ್ಯಾರ್ಥಿ ನಾಯಕ ಸಫ್ವಾನ್, ರಿಜ್ವಾನ್, ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಪಿಆರ್‌ಒ ಗಣೇಶ್ ಭಾಗವಹಿಸಿದ್ದರು.
ಸಂಸ್ಥೆಯ ಜನರಲ್ ಮ್ಯಾನೇಜರ್ ಹಾಗೂ ಪ್ಯಾರಾ ಮೆಡಿಕಲ್ ಪ್ರಾಂಶುಪಾಲ ಹೈದರ್ ಮರ್ದಾಳ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಲರೆ ಝೀನತ್ ನಿರೂಪಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ರಶೀದ್ ಕುಪ್ಪೆಟ್ಟಿ ವಂದಿಸಿದರು.

