ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜವಾಹರ್ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ವಿನ್ಸೆಂಟ್ ಲೋಬೊ ಅವರು ಮಕ್ಕಳು ಟಿವಿ ಮೊಬೈಲ್ ಗಳಿಗೆ ಬಲಿಯಾಗದೆ, ಓದಿನ ಕಡೆಗೆ ಗಮನ ಕೊಡಬೇಕು. ನಕ್ಷತ್ರಗಳಂತೆ ಸದಾ ಹೊಳೆಯುತ್ತಿರಬೇಕು ಮತ್ತು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದನ್ನು ಕಥೆಯ ಮೂಲಕ ತಿಳಿಸಿದರು.
ಶಾಲಾ ಸಂಚಾಲಕ ಫಾ. ವಾಲ್ಟರ್ ಡಿಮೆಲ್ಲೋ ಅವರು ಮಕ್ಕಳ ದಿನಾಚರಣೆಯ ಶುಭ ಸಂದೇಶವನ್ನು ನೀಡಿ ಆಶೀರ್ವದಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಫಾ. ಕ್ಲಿಫರ್ಡ್ ಪಿಂಟೋರವರು ಅತಿಥಿ ಪರಿಚಯ ಮಾಡಿ, ಮಕ್ಕಳಿಗೆ ಅದೃಷ್ಟದ ಆಟಗಳನ್ನು ಆಡಿಸಿ ಶುಭ ಹಾರೈಸಿದರು. ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಶಾಲೆಯಲ್ಲಿ ನಡೆಸಿದ ಪಠ್ಯ ಮತ್ತು ಪಠ್ಯೇತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ರಿಚರ್ಡ್ ಸಿಕ್ವೇರಾ ಭಾಗವಹಿಸಿದ್ದರು. ಶಿಕ್ಷಕ ವೃಂದದವರು ಶುಭಾಶಯ ಗೀತೆ ಹಾಗೂ ನೃತ್ಯಗಳ ಮೂಲಕ ಎಲ್ಲರ ಮನರಂಜಿಸಿದರು.
ಸಹ ಶಿಕ್ಷಕಿಯರಾದ ಮೇರಿ ಸುಜಾ ಸ್ವಾಗತಿಸಿ, ಪಲ್ಲವಿ ಕಾರ್ಯಕ್ರಮ ನಿರೂಪಿಸಿ, ನಮಿತಾ ವಂದಿಸಿದರು.

