Site icon Suddi Belthangady

ಮುಂಡಾಜೆ: ವಲಯ ಮಟ್ಟದ ಪ್ರತಿಭಾ ಕಾರಂಜಿ- 2025

ಮುಂಡಾಜೆ: ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಹಾಗೂ ಬೆಳ್ತಂಗಡಿ ವಲಯ ಮಟ್ಟದ ಬೆಳ್ತಂಗಡಿ, ಬಂಗಾಡಿ, ಅಣಿಯೂರು ಹಾಗೂ ಮುಂಡಾಜೆ ವಲಯಗಳ ಪ್ರೌಢ ಶಾಲೆಗಳ ವಲಯ ಮಟ್ಟದ ಪ್ರತಿಭಾ ಕಾರಂಜಿಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಜೊತೆಗೆ ಕನಕದಾಸ ಜಯಂತಿಯನ್ನು ಕೂಡ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಯಲ್ಲಿ ಆಸೀನರಾಗಿದ್ದ ಎಲ್ಲ ಗಣ್ಯರು ನೆರವೇರಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಚಂದ್ರ ಅವರು ಮಕ್ಕಳ ಪ್ರತಿಭೆಗಳು ಬೆಳೆಯಲು ಇಂತಹ ಅವಕಾಶಗಳು ಅನಿವಾರ್ಯ. ಸನಾತನ ಸಂಸ್ಕೃತಿಯು ಬೆಳೆಯಲು ಈ ಕಾರ್ಯಕ್ರಮಗಳು ಪೂರಕ. ದೇಶದಲ್ಲಿ ಸಂಸ್ಕೃತಿಯ ಜಾಗೃತಿ ಮೂಡಲು ಇವುಗಳು ಅತ್ಯಗತ್ಯ ಎಂದು ಹೇಳಿದರು. ಗ್ರಾಮ ಪಂಚಾಯತ್ ನ ಅಧ್ಯಕ್ಷ ಗಣೇಶ್ ಬಂಗೇರ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಅವರು ದಾಸ ಶ್ರೇಷ್ಠರಾದ ಕನಕದಾಸರ ವ್ಯಕ್ತಿತ್ವ ಹಾಗೂ ಅವರು ಸಂತ ಶ್ರೇಷ್ಠರಾದ ಬಗ್ಗೆ ಮಾತನಾಡಿದರು. ಹಾಗೂ ಪ್ರತಿಭಾ ಕಾರಂಜಿ ಬಗ್ಗೆ ಪ್ರಶಂಶೆಯ ಮಾತುಗಳನ್ನಾಡಿದರು.

ಚೇತನಾಕ್ಷಿ ಇಸಿಓ ಅವರು ಸ್ಪರ್ಧೆಗಳ ಬಗ್ಗೆ ಹಾಗೂ ವ್ಯವಸ್ಥೆಗಳ ಬಗ್ಗೆ ಮಾತನಾಡಿದರು. ಮುಂಡಾಜೆ ಅಣಿಯೂರು ವಲಯಗಳ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಅವರು ಸ್ಪರ್ಧೆಗಳ ಬಗ್ಗೆ ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ, ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕರು ಹಾಗೂ ಮುಂಡಾಜೆ ಪದವಿಪೂರ್ವ ವಿಭಾಗದ ಉಪನ್ಯಾಸಕರು ಹಾಗೂ ಎಲ್ಲ ವಿಭಾಗಗಳ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಈ ಕಾರ್ಯಕ್ರಮವು ಸಂಪನ್ನಗೊಂಡಿತು. ಮುಖ್ಯ ಮಾತಾಜಿ ಚಂದ್ರಮತಿ ಸ್ವಾಗತ ಭಾಷಣ ಮಾಡಿದರು. ಮಾತಾಜಿ ಉಷಾ ಅವರು ನಿರೂಪಿಸಿದರು. ಮಾತಾಜಿ ವಿದ್ಯಾವತಿ ವಂದಿಸಿದರು.

Exit mobile version