ತೆಂಕಕಾರಂದೂರು: ಬದ್ಯಾರ್ ಸಂತ ರಪಯೆಲ್ ಹಿ. ಪ್ರಾಥಮಿಕ ಶಾಲೆಯಲ್ಲಿ ಪೇರೋಡಿತ್ತಾಯ ಕಟ್ಟೆ ವಲಯದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಲವು ಬಹುಮಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಕಿರಿಯ ಮತ್ತು ಹಿರಿಯ ಎರಡೂ ವಿಭಾಗದಲ್ಲಿ ಟ್ರೋಫಿ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತರಾದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.
ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬದ್ಯಾರ್ ಸಂತ ರಫಯೆಲ್ ಶಾಲೆಗೆ ಟ್ರೋಫಿ

