Site icon Suddi Belthangady

ನಿಡ್ಲೆ: ಪ್ರಾ.ಕೃ.ಪ.ಸ. ಸಂಘದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸಹಕಾರ ಸಪ್ತಾಹ ಆಚರಣೆ ಮತ್ತು ಕೊಬ್ಬರಿ ಎಣ್ಣೆ ಗಿರಣಿ ಉದ್ಘಾಟನೆ-ಕಳೆಂಜ ಶಾಖೆಗೆ ಹತ್ತನೇ ವರ್ಷದ ಸಂಭ್ರಮ ಆಚರಣೆ

ನಿಡ್ಲೆ: ಪ್ರಾ.ಕೃ.ಪ.ಸ.ಸಂಘದಲ್ಲಿ72ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಮತ್ತು ಶಾಖೆಯ ಹತ್ತನೇ ವರ್ಷದ ಸವಿನೆನಪಿನ ಸಲುವಾಗಿ ಸಹಕಾರ ಸಪ್ತಾಹ ಆಚರಣೆ ಮತ್ತು ನೂತನ ಆಡಳಿತ ಮಂಡಳಿಯ ಹೊಸ ಆಲೋಚನೆಯ ಫಲವಾಗಿ ಕೊಬ್ಬರಿ ಎಣ್ಣೆ ಗಿರಣಿ ಉದ್ಘಾಟನೆ ಕಾರ್ಯಕ್ರಮ ನ. 17ರಂದು ನಡೆಯಿತು. ಬೆಳಿಗ್ಗೆ 11.30 ಕ್ಕೆ ನಿಡ್ಲೆಯ ಕೇಂದ್ರ ಕಚೇರಿಯಲ್ಲಿ ದ್ವಜಾರೋಹಣ ನಡೆದು ಆ ಬಳಿಕ ಶಾಸಕ ಹರೀಶ್ ಪೂಂಜ ರವರು ಕೊಬ್ಬರಿ ಎಣ್ಣೆ ಗಿರಣಿ ಉದ್ಘಾಟನೆ ನಡೆಸಿದರು. ಆ ಬಳಿಕ ಕಳೆಂಜ ಗ್ರಾಮ ಪಂಚಾಯತ್ ಕಟ್ಟಡದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಧನಂಜಯ ಗೌಡ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಶಾಸಕ ಹರೀಶ್ ಪೂಂಜಾ, ಡಿ. ಸಿ. ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಡೀಕಯ್ಯ ಎಮ್.ಕೆ., ಕಳೆಂಜ ಗ್ರಾ.ಪಂ ಉಪಾಧ್ಯಕ್ಷ ವಿಶ್ವನಾಥ ಗೌಡ ಹೆಚ್., ನಿಡ್ಲೆ ಗ್ರಾ. ಪಂ. ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದಿನ್, ಕಾಯರ್ತಡ್ಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ಹೆಚ್., ಶಾಲೆತ್ತಡ್ಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹರೀಶ್ ರಾವ್ ಕಾಯಡ, ಬರೆಂಗಾಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಂದರ ಗೌಡ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ಆನಂದ ಗೌಡ, ರಮೇಶ್ ರಾವ್ ಕೆ., ಹೇಮಂತ್ ಗೌಡ ಕೆ., ಜಯರಾಮ ಪಾಳಂದೆ ಎಸ್., ಧನಂಜಯ ಬಿ., ಗಾಯತ್ರಿ ಹೆಚ್. ಗೌಡ, ವಿಜಯಲಕ್ಷ್ಮೀ ಕೆ., ರಾಜು, ಮೋಹನ್ ಪೂಜಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮನಾಭ ಪಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

ಕಾಯರ್ತಡ್ಕದಲ್ಲಿ ಹಲವು ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಾ ಬಂದಿರುವ ಡಾ. ಟಿ. ವಿ ಜೋಸೆಫ್, ಹಾಗೂ ನಿಡ್ಲೆ ಪ್ರಾ. ಕೃ. ಪ. ಸ ಸಂಘದ ಕಳೆಂಜ ಶಾಖೆಯನ್ನು ನಿರ್ಮಿಸಲು ಸಹಕರಿಸಿದ ಟಿ.ಎಸ್. ನಿತ್ಯಾನಂದ ರೈ, ಹಾಗೂ ಹಲವಾರು ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತ ಬಡ ರೋಗಿಗಳ ಪಾಲಿಗೆ ಆಶಾಕಿರಣದಂತಿರುವ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜಇದರ ಪರವಾಗಿ ಸಂಘದ ಅಧ್ಯಕ್ಷ ಆಗಸ್ಟಿನ್ ಟಿ.ಎ., ನಿಡ್ಲೆ ಭಾಗದಲ್ಲಿ ನಿರಂತರ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಎಲ್ಲರಿಗೂ ಮಾದರಿಯಂತಿರುವ ನಿಸರ್ಗ ಯುವಜನೇತರ ಮಂಡಲ ಬರೆಂಗಾಯ ಇದರ ಪರವಾಗಿ ಮಂಡಲದ ಅಧ್ಯಕ್ಷ ಪುನೀತ್ ಗೌಡ ಅವರನ್ನು ಸನ್ಮಾನಿಸಲಾಯಿತು.

ಹಾಗೆಯೇ ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಮತ್ತು ಶಾಸಕ ಹರೀಶ್ ಪೂಂಜ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಂಘದ ನಿರ್ದೇಶಕಿ ಗಾಯತ್ರಿ ಹೆಚ್. ಗೌಡ ಪ್ರಾರ್ಥಿಸಿ, ನಿರ್ದೇಶಕ ರಮೇಶ್ ರಾವ್ ಕಾಯಡ ಸ್ವಾಗತಿಸಿ, ಸಿಬ್ಬಂದಿ ಯೋಗೀಶ್ವರಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ವಿಜಯಲಕ್ಷ್ಮೀ ಕೆ. ಧನ್ಯವಾದವಿತ್ತರು.

Exit mobile version