ಬೆಳ್ತಂಗಡಿ: ಅಬ್ದುಲ್ ಖಾದರ್ ಅವರ ಪತ್ನಿ ಆಯಿಷಾ (38ವ) ಅವರು ನ. 14ರಂದು ಕಾಣೆಯಾಗಿದ್ದಾರೆ. ಈ ಪ್ರಕರಣ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅಬ್ದುಲ್ ಖಾದರ್ ಅವರ ದೂರಿನಂತೆ ಅವರು ವಾಸವಿರುವ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಎನ್.ಸಿ.ರೋಡ್ ಎಂಬಲ್ಲಿಂದ ಕಾಣೆಯಾಗಿದ್ದಾರೆ. ಪತ್ತೆಯಾದಲ್ಲಿ ಕೂಡಲೇ ಪುಂಜಾಲಕಟ್ಟೆ ಪೊಲೀಸ್ ಠಾಣೆ (8277986416, 8277986417) ಅಥವಾ ದ.ಕ ಜಿಲ್ಲಾ ಕಂಟ್ರೋಲ್ ರೂಂ (0824-2220500) ಗೆ ಸಂಪರ್ಕಿಸುವಂತೆ ಕೋರಲಾಗಿದೆ.

