ಬೆಳ್ತಂಗಡಿ: ಕುವೆಟ್ಟು ಮತ್ತು ಓಡಿಲ್ನಾಳ ಬಿಜೆಪಿ ಶಕ್ತಿ ಕೇಂದ್ರಗಳ ಅಭ್ಯಾಸವರ್ಗ ಕಾರ್ಯಕ್ರಮ ನ.16ರಂದು ಕುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಕುಲಾಲ್ ಅವರ ಮನೆಯಲ್ಲಿ ನಡೆಯಿತು. ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಗಂಗಯ್ಯ ಮೂಲ್ಯ ಮತ್ತು ಕುವೆಟ್ಟು ಪಂಚಾಯತ್ ಮಾಜಿ ಅಧ್ಯಕ್ಷರಾದ ಪೂವಪ್ಪ ಭಂಡಾರಿಯವರು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿ ಶುಭ ಹಾರೈಸಿದರು. ಉಮೇಶ್ ನರ್ತಿಕಲ್ಲು ʼನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆʼವಿಷಯ ಮಂಡನೆ ಮಾಡಿದರು. ಸುದೀರ್ ಸುವರ್ಣ ಅಳದಂಗಡಿಯವರು ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ ಎಂಬ ವಿಷಯ ಮಂಡಿಸಿದರು. ವಿಕಸಿತ ಭಾರತದ ಅಮೃತ ಕಾಲದಲ್ಲಿ ನಮ್ಮ ಸಕ್ರಿಯತೆ ವಿಷಯವನ್ನು ಸೀತಾ ರಾಮ್ ಬೆಲಾಲ್ ಮಂಡಿಸಿದರು. ಬೂತ್ ಷ ಬೈಠಕ್ ಧರ್ಮಸ್ಥಳ ಮಹಾಶಕ್ತಿಕೇಂದ್ರ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆಯವರು ವರದಿ ಪಡೆದುಕೊಂಡರು.
ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣ ಮಾಡಿದರು. ಪಕ್ಷದ ಪ್ರಮುಖರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಮತಾ ಶೆಟ್ಟಿ ದೇವಸ್ಯ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಲಾಲ್, ಹಿಂದುಳಿದ ಮೋರ್ಚಾದ ತಾಲೂಕು ಕಾರ್ಯದರ್ಶಿ ವಿಠಲ ಆಚಾರ್ಯ, ಕುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ತಿಲಕ್ ಕಂಚಿಂಜ, ಕುವೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಹಾಸ ದಾಸ್, ಓಡಿಲ್ನಾಳ ಶಕ್ತಿ ಕೇಂದ್ರದ ಅಧ್ಯಕ್ಷ ರಾಜಪ್ರಕಾಶ್ ಪಡ್ಡೈಲು ಹಾಗು ಕುವೆಟ್ಟು ಮತ್ತು ಓಡಿಲ್ನಾಲ ಭಾಗದ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿಯವರು ಬಿಜೆಪಿ ಗೀತೆಯೊಂದಿಗೆ ಸಂಪದ ಆರಂಭ ಆಗಿ, ರಮ್ಯಾ ಅವರು ವಂದೇಮಾತರಂ ಗೀತೆ ಹಾಡಿದರು. ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಸ್ವಾಗತಿಸಿದರು. ಬರಾಯ ಗ್ರಾಮ ಪಂಚಾಯತ್ ಸದಸ್ಯ ನಿತಿನ್ ಬರಾಯ ಧನ್ಯವಾದ ಅರ್ಪಿಸಿದರು.

