ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಈ ವರ್ಷದ ಅತಿ ದೊಡ್ಡ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜೆಸಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು. ಜೆಸಿ ಅಧ್ಯಕ್ಷೆ ಆಶಾಲತಾ ಪ್ರಶಾಂತ್, ವಲಯ ಉಪಾಧ್ಯಕ್ಷರು ಜೆ.ಎಫ್.ಎಂ. ರಂಜಿತ್ ಎಚ್.ಡಿ., ಪೂರ್ವ ಅಧ್ಯಕ್ಷರು ಜೆಸಿ ಸುಭಾಶ್ಚಂದ್ರ ಎಂ.ಪಿ., ಪ್ರಶಾಂತ್ ಲಾಯಿಲ ಸಪ್ತಾಹ ಸಂಯೋಜಕರು ಜೆಸಿ ರಕ್ಷಿತ್ ಅಂಡಿಂಜೆ, ಜೆಸಿ ರಜತ್ ಮೋರ್ತಾಜೆ, ಲೇಡಿ ಜೇಸಿ ಸಂಯೋಜಕರು ಜೆ.ಎಫ್.ಎಂ. ಚಿತ್ರಪ್ರಭ, ಕಾರ್ಯದರ್ಶಿ ಜೆಸಿ ಪ್ರಮೋದ್, ಸದಸ್ಯರು ಸಮನ್ವತ್ ಉಪಸ್ಥಿತರಿದ್ದರು.
ಜೆಸಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

