ಹತ್ಯಡ್ಕ: ರಾಣೆಯಾರ್ ಸಮಾಜ ಸೇವಾ ಸಂಘ ವಲಯ ಶಾಖೆ ತುಂಬೆತ್ತಡ್ಕ ವತಿಯಿಂದ ನ.14ರಂದು ಕುಂಟಾಲಪಳಿಕೆ ಸ.ಹಿ.ಪ್ರಾ. ಪೋಷಕ -ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಶ್ರಮದಾನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರಾಣೆಯಾರ್ ಸಮಾಜ ಬಾಂಧವರು ಶಾಲೆ ವಠಾರದ ಸುತ್ತಮುತ್ತ ಹುಲ್ಲು ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿದರು.
ಈ ಹಿಂದೆಯು ರಾಣೆಯಾರ್ ಸಮಾಜ ಸೇವಾ ಸಂಘ ತುಂಬೆತ್ತಡ್ಕ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ನಡೆಸುತ್ತ ಬಂದಿದೆ.

