ಉಜಿರೆ: ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಬೆಳ್ತಂಗಡಿ ತಾಲೂಕಿನ ಸಮಸ್ತ ಭಕ್ತ ವರ್ಗ ಜಾತಿ, ಮತ, ಧರ್ಮ ಭೇದ ಮರೆತು ಒಂದಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭಕ್ತಿ ಭಜನೆಯ ಪಾದಯಾತ್ರೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ನ.೧೫ ರಂದು ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಲೋಕಸುಭಿಕ್ಷೆ, ಸುಖ, ಶಾಂತಿ, ನೆಮ್ಮದಿಗಾಗಿ ಸಾಮೂಹಿಕವಾಗಿ ಸಂಪ್ರಾರ್ಥಿಸಿ ಧ್ವಜಸ್ಥಂಭದ ಬಳಿ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ ಪಡುವೆಟ್ನಾಯರಿಂದ ದೀಪ ಪ್ರಜ್ವಲನೆ ಮೂಲಕ ೧೩ ನೇ ವಷದ ಭಕ್ತಿ ಭಜನೆಯ ಪಾದಯಾತ್ರೆಗೆ ಚಾಲನೆ ನೀಡಿದರು.
ಉಜಿರೆಯಲ್ಲಿ ಸಮಾವೇಶಗೊಂಡು ಪಾದಯಾತ್ರೆ ಧರ್ಮಸ್ಥಳ ಕ್ಷೇತ್ರಕ್ಕೆ ಒಗ್ಗಟ್ಟಿನಿಂದ “ಓಂ ನಮಃ ಶಿವಾಯ ನಮಃ” ನಾಮ ಮಂತ್ರ ಪಠಿಸುತ್ತ ಭಕ್ತರು ಹೆಜ್ಜೆ ಹಾಕಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, MLC ಪ್ರತಾಪ್ ಸಿಂಹ ನಾಯಕ್, SKDRDP ಅನಿಲ್ ಕುಮಾರ್, ಉಜಿರೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ಚಂದ್ರ, ಮಂಗಳೂರು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ರವೀಂದ್ರ ಶೆಟ್ಟಿ ಬಳಂಜ, ಉದ್ಯಮಿ ಮೋಹನ್ ಶೆಟ್ಟಿಗಾರ್, ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್, ವಸಂತ ಸಾಲ್ಯಾನ್, ಅರುಣ್ ಕುಮಾರ್, ಸಂತೋಷ್ ಕುಮಾರ್ ಕಾಪಿನಟ್ಕ, ರವಿ ಚಕಿತ್ತಾಯ, ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ್ ಪಿ., ಪ್ರಕಾಶ್ ಶೆಟ್ಟಿ ನೋಚ್ಚ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಜೈನ್, ವಸಂತ್ ಸುವರ್ಣ, ಶ್ರೀಧರ್ ಕೆ.ವಿ., ಡಾ. ಎಂ.ಪಿ. ಶ್ರೀನಾಥ್, ತಿಮ್ಮಪ್ಪ ಗೌಡ, ಬಿ. ಎ ರಹಿಮಾನ್, ಪ್ರಮೋದ್ ಕುಮಾರ್ ಜೈನ್, ಕಾಶಿಮ್ ಮಲ್ಲಿಗೆ ಮನೆ, ಯದುಪತಿ ಗೌಡ, ಪುಷ್ಪವತಿ ಆರ್. ಶೆಟ್ಟಿ, ಮಮತ ಶೆಟ್ಟಿ, ಅಗ್ರಿಲಿಫ್ ನ ಅವಿನಾಶ್ ರಾವ್, ಗಣೇಶ್ ಇಂಜಿನಿಯರ್, ರಾಜಶೇಖರ್ ಅಜ್ರಿ, ಸೀತಾರಾಮ್, ಶ್ರೀಧರ್ ರಾವ್, ಶಾರದೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ ಪಟ್ರಮೆ, ರತ್ನ ವರ್ಮಾ ಜೈನ್, ಗುರುಪ್ರಸಾದ್, ಪುಷ್ಪರಾಜ್ ಜೈನ್, ಈಶ್ವರ ಬೈರ, ವಸಂತ್ ಸಾಲ್ಯಾನ್ ಯೋಜನಾಧಿಕಾರಿ, ಸತೀಶ್ ಕಾಮತ್ ಕೊಲ್ಲಿ, ವಸಂತ್ ಭಟ್ ನಾರಾವಿ, ಜನಾರ್ಧನ್ ಸಿರಿ, ಎಲ್. ಹೆಚ್. ಮಂಜುನಾಥ್, ಡಾ. ಪ್ರದೀಪ್ ನಾವರ, ಪೂರನ್ ವರ್ಮಾ, ಲಕ್ಷ್ಮಣ್ ಮೂಲ್ಯ ಉಪಸ್ಥಿತರಿದ್ದರು.

