Site icon Suddi Belthangady

ಮಕ್ಕಳ ದಿನಾಚರಣೆಯ ಪ್ರಯುಕ್ತ ನೂರ ಗೋಲ್ಡ್ & ಡೈಮಂಡ್ಸ್ ಮಳಿಗೆಯಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ

ಬೆಳ್ತಂಗಡಿ: ಮಕ್ಕಳ ದಿನಾಚರಣೆಯ ಪ್ರಯುಕ್ತ ನೂರ ಗೋಲ್ಡ್ & ಡೈಮಂಡ್ಸ್ ಮಳಿಗೆಯಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೂರು ವಿಭಾಗಗಳಲ್ಲಿ ನಡೆಸಿದ ಪ್ರಾಥಮಿಕ ಶಾಲೆಯ ಸ್ಪರ್ಧೆಯಲ್ಲಿ ಇಝಾನ್ ಅರ್ಶ್ ಅಕಾಡಮಿ ಕಕ್ಕಿಂಜೆ, ಪುಷ್ಠಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ, ಆರಾಧ್ಯ ಎಸ್. ಡಿ. ಎಂ. ಶಾಲೆ ಬೆಳ್ತಂಗಡಿ ಈ ಮೂವರು ವಿಜೇತರಾಗಿ ಮೂಡಿ ಬಂದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಳ್ತಂಗಡಿ ಡಿ.ವೈ.ಎಸ್.ಪಿ ರೋಹಿಣಿ ಸಿ.ಕೆ. ಜೊತೆಗೆ ಮೇಕಪ್ ಆರ್ಟಿಸ್ಟ್’ಗಳಾದ ನಿಶ್ಮ ಹಝೀಮ್, ಸಹನಾ, ನಿಶ್ಮಾ, ಅಮೃತಾ, ಫಾತಿಮಾ ರಿಹಾ, ಅವರು ಭಾಗವಹಿಸಿದ್ದಾರೆ. ಈ ಮೊದಳು ಲಕ್ಕೀ ಕೂಪನ್ ಡ್ರಾ. ದಲ್ಲಿ ವಿಜೇತರಾದ ಫಾತಿಮಾ ಉಜಿರೆ ಅವರಿಗೆ ಸ್ಕೂಟಿ’ಯ ಕೀ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯ ನಿರ್ವಾಹಕ ಕೆ.ಎಸ್. ಮುಸ್ತಫಾ ಕಕ್ಕಿಂಜೆ ಹಾಗೂ ನಝೀರ್, ಸಿದ್ದೀಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version